ಮಂಗಳೂರು: ಇಲ್ಲಿಯ (Mangaluru Jail) ಕೋಡಿಯಾಲ್ ಬೈಲ್ ನಲ್ಲಿನ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಗಾಂಜಾ, ಡ್ರಗ್ಸ್, ಮೊಬೈಲ್ ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ.
ಇಂದು ಬೆಳಿಗಿನ ಜಾವ 150 ಕ್ಕೂ ಅಧಿಕ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಕೈದಿಗಳನ್ನು ಹಾಗೂ ಸೆಲ್ ಗಳಲ್ಲಿ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗಾಂಜಾ ಹಾಗೂ ಡ್ರಗ್ಸ್ ಪ್ಯಾಕೇಟ್ ಗಳು ಸಿಕ್ಕಿದ್ದು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ, 25 ಮೊಬೈಲ್ ಫೋನ್ ಗಳು, ಐದು ಚಾರ್ಜರ್, ಐದು ಇಯರ್ ಫೋನ್, ಒಂದು ಬ್ಲೂಟೂತ್ ಡಿವೈಸ್, ಒಂದು ಪೆನ್ ಡ್ರೈವ್, ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಡ್ರಗ್ಸ್, ಗಾಂಜಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ತನಿಖೆಗೆ ಆದೇಶಿಸಿದ್ದಾರೆ.
ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿ, ಮೂವರು ಎಸಿಪಿ, 15 ಇನ್ ಸ್ಪೆಕ್ಟರ್, 150 ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.








