ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಿದ್ದು, ಭಾರತದ ಆಟಗಾರ್ತಿ ಮನು ಭಾಕರ್ ಏರ್ ಪಿಸ್ತೂಲ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಧಿಕೃತ ಚಾಲನೆಯ ಮೊದಲ ದಿನ ಶೂಟಿಂಗ್ ನಲ್ಲಿ ಭಾರತಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಮನು ಭಾಕರ್ ಅರ್ಹತಾ ಸ್ಪರ್ಧೆಯಲ್ಲಿ 600 ಅಂಕಗಳಿಗೆ 580 ಅಂಕಗಳನ್ನು ಗಳಿಸಿದ್ದು, ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯುವುದರ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಒಟ್ಟು 45 ಅಥ್ಲೀಟ್‌ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ 580 ಅಂಕಗಳನ್ನು ಗಳಿಸಿದ ಮನು ಮೂರನೇ ಸ್ಥಾನ ಗಳಿಸಿದರೆ, ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೋರ್ವ ಆಟಗಾರ್ತಿ ಶೂಟರ್ ರಿದಮ್ ಸಾಂಗ್ವಾನ್ 15ನೇ ಸ್ಥಾನ ಪಡೆದು ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಶೂಟರ್ ಮನು ಭಾಕರ್ ಫೈನಲ್ ತಲುಪುವುದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕದ ಭರವಸೆ ಮೂಡಿಸಿದ್ದಾರೆ. ಮನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಇದೇ ಸ್ಪರ್ಧೆಯಲ್ಲಿ 12 ನೇ ಸ್ಥಾನ ಗಳಿಸಿದ್ದರು. ಆದರೆ ಈ ಬಾರಿ ಪದಕ ರೇಸ್ ಗೆ ಬಂದು ತಲುಪಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನ ಆರು ಸುತ್ತಿನಲ್ಲೂ ಮನು ಅದ್ಭುತ ಪ್ರದರ್ಶನ ನೀಡಿದರು. ಮೊದಲ ಸೀರಿಸ್ನಲ್ಲಿ 100ಕ್ಕೆ 97 ಅಂಕ ಕಲೆಹಾಕಿದರೆ, ಎರಡನೇ ಸೀರಿಸ್ನಲ್ಲಿ 97 ಅಂಕಗಳನ್ನು ಗಳಿಸಿದರು. ಮೊದಲಾರ್ಧ ಮುಗಿಯುವ ವೇಳೆಗೆ 300ಕ್ಕೆ 292 ಅಂಕಗಳನ್ನು ಸಂಪಾಧಿಸಿ, ಫೈನಲ್‌ಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು.
45 ಶೂಟರ್ಗಳು ಸ್ಪರ್ಧಿಸಿದ್ದ ಈ ಈವೆಂಟ್ನಲ್ಲಿ ಭಾರತದಿಂದ ಮತ್ತೊಬ್ಬ ಸ್ಪರ್ಧಿಯಾಗಿ, ರಿದಮ್ ಸಾಂಗ್ವಾನ್ ಕೂಡ ಭಾಗವಿಸಿದ್ದರು. ರಿದಮ್ ಕೂಡ ಮೊದಲ ಮೂರು ಸೀರಿಸ್ಗಳಲ್ಲಿ 97, 92 ಮತ್ತು 97 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕೊನೆಯ ಮೂರು ಸೀರಿಸ್ಗಳಲ್ಲಿ ಕೊಂಚ ಲಯ ಕಳೆದುಕೊಂಡ ಅವರಿಗೆ ಕೇವಲ 96, 95 ಮತ್ತು 96 ಅಂಕಗಳನ್ನು ಕಲೆಹಾಕಲು ಸಾಧ್ಯವಾಯಿತು. ಹೀಗಾಗಿ 573 ಅಂಕಗಳನ್ನು ಸಂಪಾಧಿಸಿ ಪಟ್ಟಿಯಲ್ಲಿ 15 ನೇ ಸ್ಥಾನವನ್ನು ಪಡೆದರು. ಈ ಮೂಲಕ ಅವರು ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು.
ಗ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಮನು ಭಾಕರ್ ಈಗ ಜುಲೈ 28 ರಂದು ನಡೆಯಲ್ಲಿರುವ ಪದಕ ಸ್ಪರ್ಧೆಯಲ್ಲಿ ಸೆಣಸಾಟ ನಡೆಸಲಿದ್ದಾರೆ. ಧ್ಯಾಹ್ನ 3:30ಕ್ಕೆ ಸ್ಪರ್ಧೆ ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ಹಂಗೇರಿಯ ಆಟಗಾರ್ತಿ ಮೇಜರ್ ವೆರೋನಿಕಾ ಮತ್ತು ಎರಡನೇ ಸ್ಥಾನ ಪಡೆದ ಹೊ ಯೆ ಜಿನ್ ಎದುರು ಕಠಿಣ ಸ್ಪರ್ಧೆ ನಡೆಸಲಿದ್ದಾರೆ.








