ನೈಟ್ ನ್ಯೂಸ್ ಅಪ್ಡೇಟ್
1. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ರೈಲು ಡಿಕ್ಕಿ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಇವರೆಲ್ಲ ಸಿಖ್ ಯಾತ್ರಿಕರು, ಪೇಶಾವರ ಮೂಲದವರಾಗಿದ್ದು, ಅಪಘಾತ ಸಂಭವಿಸಿದಾಗ ಶೇಕುಪುರ ಮೂಲದ ನಂಕಾನಾ ಸಾಹಿಬ್ ದೇಗುಲದಿಂದ ಹಿಂದಿರುಗುತ್ತಿದ್ದರು.ಒಟ್ಟು ಬಸ್ಸಿನಲ್ಲಿ 22 ಪ್ರಯಾಣಿಕರಿದ್ದು ಮಾನವರಹಿತ ಕ್ರಾಸಿಂಗ್ನಲ್ಲಿ ಚಾಲಕನ ಅಜಾಗರೂಕತೆಯಿಂದ ಹಳಿ ದಾಟಲು ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಘಟನೆ ಸಂಭವಿಸಿದೆ.
ಲಕ್ಷಣರಹಿತ ಕೋವಿಡ್ ಸೋಂಕಿತರಿಗೆ ಹೋಂ ಐಸೋಲೇಶನ್ ಗಾಗಿ ಸರ್ಕಾರದ ನೂತನ ಮಾರ್ಗಸೂಚಿ ಬಿಡುಗಡೆ
2. ಕ್ರೊಯೇಷಿಯಾ ಸಂಸತ್ತಿನ ಚುನಾವಣೆ
ಕ್ರೊಯೇಷಿಯಾ ಈ ವಾರಾಂತ್ಯದಲ್ಲಿ ಸಂಸತ್ತಿನ ಚುನಾವಣೆಯನ್ನು ನಡೆಸುತ್ತಿದೆ, ಕೊರೊನ ಹೆಮ್ಮಾರಿಯ ನಡುವೆ ಜನರು ಯಾವ ರೀತಿ ತನ್ನ ಮತ ಚಲಾವಣೆ ಮಾಡುತ್ತಾರೆ ಅನ್ನುವುದೇ ಯಕ್ಷಪ್ರಶ್ನೆ ಆಗಿದೆ. ಈಗಾಗಲೇ ಕೊರೊನ ಹೆಮ್ಮಾರಿಯಿಂದ ಲೊಕ್ಡೌನ್ ಆಗಿದ್ದ ಕ್ರೊಯೇಷಿಯಾ ಇದೀಗ ಮತದಾನ ಮಾಡಲು ಲಾಕ್ಡೌನ್ ನಿಯಮಗಳನ್ನು ಸಡಿಲಿಸಿದ ನಂತರ ವೈರಸ್ ಪ್ರಕರಣಗಳಲ್ಲಿ ಹೊಸ ಏರಿಕೆಯೊಂದಿಗೆ ಆದಿತ್ಯವಾರದ ಮತದಾನ ನಡೆಯಲಿದ್ದು ಜನರ ಪ್ರತಿಕ್ರಿಯೆ ನೋಡಬೇಕಿದೆ. ಈಗಾಗಲೇ ಸೂಕ್ತ ಸ್ಪರ್ಧಾಗಳಿಲ್ಲದೆ ಅಭ್ಯರ್ಥಿಗಳು ಮತವನ್ನು ಸೆಳೆಯಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಿದೇಶಿ ತಬ್ಲಿಘಿ ಜಮಾಅತ್ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದಲ್ಲಿ ಗಡೀಪಾರು ಮಾಡುವಂತಿಲ್ಲ – ಸುಪ್ರೀಂ ಕೋರ್ಟ್
3. ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣದಲ್ಲಿ ಭಾರೀ ಭೂಕಂಪನ
ದೆಹಲಿ, ಗುರುಗ್ರಾಮ್, ನೋಯ್ಡಾದಲ್ಲಿ ಭೂಕಂಪ. ಭೂಕಂಪದ ಕೇಂದ್ರ ಬಿಂದು ಅಲ್ವಾರ್, ರಾಜಸ್ಥಾನ ಮತ್ತು ಉತ್ತರ ಭಾರತದ ಭಾಗದಲ್ಲಿ ನಡುಕ ಉಂಟಾಯಿತು. ಆದರೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲ.
ಯೋಗಿನಾಡಲ್ಲಿ ಕಾಂಗ್ರೆಸ್ ಬಾವುಟ ಹಾರಿಸ್ತಾರಾ ಜ್ಯೂ. ಇಂದಿರಾ..?
4. ಫ್ರೆಂಚ್ ಪ್ರಧಾನ ಮಂತ್ರಿಯಾಗಿ ಜೀನ್ ಕ್ಯಾಸ್ಟೆಕ್ಸ್ – ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ದೇಶದ ಹೊಸ ಪ್ರಧಾನ ಮಂತ್ರಿಯಾಗಿ ಜೀನ್ ಕ್ಯಾಸ್ಟೆಕ್ಸ್ ಅವರನ್ನು ನೇಮಿಸಿದ್ದಾರೆ. ಲಾಕ್ಡೌನ್ ಆಗಿ ತಿಂಗಳ ನಂತರ ಆರ್ಥಿಕತೆಯನ್ನು ಪುನರಾರಂಭಿಸುವತ್ತ ಗಮನಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದು ಶುಕ್ರವಾರ ಎಡ್ವರ್ಡ್ ಫಿಲಿಪ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದರು.
https://www.facebook.com/saakshatv/
Please Like and follow us on Facebook And Share
Do support us
5. ರಷ್ಯಾದ 33 ಫೈಟರ್ ಜೆಟ್ ಗಳ ಖರೀದಿಗೆ ಮುಂದಾದ ಭಾರತ – ಚೀನಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತವು ರಷ್ಯಾದ 33 ಫೈಟರ್ ಜೆಟ್ಗಳನ್ನು $ 2.43 ಬಿಲಿಯನ್ಗೆ ಖರೀದಿಸಲಿದ್ದು ಜೊತೆಗೆ 59 ಇತರ ಜೆಟ್ ಮೇಲ್ದಜೆಗೆ ತರಲು ಭಾರತದ ರಕ್ಷಣಾ ಸಚಿವಾಲಯ ಗುರುವಾರ ಸಹಿ ಹಾಕಿದೆ.21 ಮಿಗ್ -29 ಮತ್ತು 12 ಸು -30 ಎಂಕೆಐ ಖರೀದಿಯು, ಜೊತೆಗೆ ಅಸ್ತಿತ್ವದಲ್ಲಿರುವ 59 ಮಿಗ್ -29 ಗಳನ್ನು ನವೀಕರಿಸುವುದು ದೇಶದ ವಾಯುಪಡೆಯ ಯುದ್ಧ ದಳಗಳನ್ನು ವೃದ್ಧಿಸಲಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ.









