ಹುಬ್ಬಳ್ಳಿ: ವ್ಯಕ್ತಿಯೊಬ್ಬ ನಾಲ್ಕು ಮಕ್ಕಳ ತಾಯಿಯನ್ನು ಮದುವೆಯಾಗಿ, ನಂತರ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದ ಆರೋಪವೊಂದು ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು (Dharwad Kalaghatagi Police) ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬೆಂಗಳೂರು (Bengaluru) ಮೂಲದ ಮುಜಾಹಿದ್ ಖಾನ್ ಬಂಧಿತ ಆರೋಪಿ. ಆರೋಪಿ ಮುಜಾಹಿದ್ ನಾಲ್ಕು ಮಕ್ಕಳ ತಾಯಿಯಾಗಿದ್ದ ಅಶ್ವಿನಿ ಎಂಬ ಮಹಿಳೆಯನ್ನು 2017ರಲ್ಲಿ 2ನೇ ಮದುವೆಯಾಗಿದ್ದ. ಆರಂಭದಲ್ಲಿ ಚೆನ್ನಾಗಿದ್ದ ವ್ಯಕ್ತಿ ದಿನ ಕಳೆದಂತೆ ಮುಜಾಹಿದ್, ಪತ್ನಿಯನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ನಿತ್ಯ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಅಲ್ಲದೇ, ಜೀವ ಬೆದರಿಕೆ ಹಾಕುತ್ತಿದ್ದ. ಈ ಕುರಿತು ಅಶ್ವಿನಿ, ತನ್ನ ಪತಿ ವಿರುದ್ಧ ಕಲಘಟಗಿ ಪೊಲೀಸರಿಗೆ ದೂರು ನೀಡಿದ್ದರು.
ಅಶ್ವಿನಿಗೆ ಶ್ರೀರಾಮಸೇನೆ ಬೆಂಬಲ ಕೂಡ ಸಿಕ್ಕಿದೆ.ಈ ದೂರು ಆಧರಿಸಿ ಬೆಂಗಳೂರಿನಲ್ಲಿ ಮುಜಾಹೀದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.








