ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ (Spandana) ಇಹಲೋಕ ತ್ಯಜಿಸಿ ಆಗಸ್ಟ್ 6ಕ್ಕೆ ಒಂದು ವರ್ಷ ಕಳೆದಿವೆ. ಹೀಗಾಗಿ ಪತ್ನಿ ನೆನೆದು ಭಾವುಕರಾಗಿದ್ದಾರೆ.
ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಮಗ ಮತ್ತು ಪತ್ನಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಭಾವುಕರಾಗಿ ಬರೆದಿದ್ದಾರೆ. ಪತ್ನಿಯ ಸಾವಿನ ನಂತರ ಮೌನಕ್ಕೆ ಶರಣಾಗಿದ್ದ ವಿಜಯ ನಂತರ ದಿನಗಳಲ್ಲಿ ಚೇತರಿಸಿಕೊಂಡು ಸ್ಪಂದನಾ ಕಿರುತ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು.
ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೆ ಮಿಡಿದ ನಿನ್ನ ಹೃದಯ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ್ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಹೇಳಿಕೊಂಡಿದ್ದರು.
2017ರಲ್ಲಿ ವಿಜಯ-ಸ್ಪಂದನಾ ಪರಸ್ಪರ ಪ್ರೀತಿಸಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗಿದ್ದರು. ಅವರಿಗೆ ಶೌರ್ಯ ಎಂಬ ಪುತ್ರ ಇದ್ದಾನೆ. ಆದರೆ, ಬ್ಯಾಂಕಾಕ್ ಗೆ ತೆರಳಿದ ಸಂದರ್ಭದಲ್ಲಿ ಹೃದಯಾಘಾತದಿಂದ (Heart Attack) ಸ್ಪಂದನಾ ಸಾವನ್ನಪ್ಪಿದ್ದರು. ಇದು ಇಡೀ ಕರ್ನಾಟಕಕ್ಕೆ ಶಾಕ್ ನೀಡಿತ್ತು.