ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಡಾಖ್ ಪ್ರದೇಶದ ಲೇಹ್ ನ ಮುಂಚೂಣಿ ಸೇನಾನೆಲೆ ನೀಮುಗೆ ಭೇಟಿ ಕೊಟ್ಟು, ನಮ್ಮ ಯೋಧರ ಜತೆ ಮಾತುಕತೆ ನಡೆಸಿದರು. ಪ್ರಧಾನಿಗಳ ಈ ಭೇಟಿಗೆ ಚೀನಾ ಭಾರಿ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಧಾನಿಗಳ ಲೇಹ್ ಭೇಟಿ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಟ್ವೀಟ್ ಮಾಡಿದ್ದು, ಲಡಾಖ್ ನಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಣಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆ ನಡೆಸುತ್ತಿವೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ರೀತಿಯಲ್ಲಿ ಅಥವಾ ಪ್ರಚೋದಿಸುವ ರೀತಿಯ ವರ್ತನೆಗಳು ಸಲ್ಲದು ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಲಡಾಖ್ ನಲ್ಲಿ ತುಂಬಾ ಉದ್ವಿಗ್ನ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೋಧಿ ಅವರ ಭೇಟಿ ಅಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟ ಹದಗೆಡಿಸುತ್ತದೆ. ಆದ್ದರಿಂದ ಲೇಹ್ ಗೆ ಭೇಟಿ ನೀಡುವಂತಹ ಕ್ರಮಗಳನ್ನು ತೆಗೆದುಕೊಳ್ಳದಿರಿ ಎಂದಿದ್ದಾರೆ.







