ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಇಂದಿನಿಂದ ಆರಂಭವಾಗುತ್ತಿದೆ.
ಸದ್ಯದ ಅವಾಂತರವನ್ನು ತಪ್ಪಿಸುವುದಕ್ಕಾಗಿ ತಾತ್ಕಾಲಿಕವಾಗಿ ಗೇಟ್ ಅಳವಡಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಮಂಗಳವಾರ ಸಂಜೆಯಿಂದ ಗೇಟ್ ಅಳವಡಿಸುವ ಕಾರ್ಯ ಆರಂಭವಾಗಲಿದೆ. ನೀರು ಖಾಲಿಯಾಗುತ್ತಿರುವುದರಿಂದಾಗಿ ತಾತ್ಕಾಲಿಕವಾಗಿ ಗೇಟ್ ಅಳವಡಿಸಿಕಿ, ನಂತರ ಶಾಶ್ವತ ಕಾರ್ಯ ಕೈಗೊಳ್ಳಲು ತೀರ್ಮನಿಸಲಾಗಿದೆ. ಹೀಗಾಗಿ ನೀರಿನಲ್ಲಿಯೇ ತಾತ್ಕಾಲಿಕ ಕಾರ್ಯ ಕೈಗೊಳ್ಳಲಾಗುತ್ತದೆ.
ಕನ್ನಯ್ಯನಾಯ್ಡು ನೇತೃತ್ವದಲ್ಲಿ 20 ಅಡಿ ಅಗಲ 60 ಅಡಿ ಎತ್ತರದ ಗೇಟ್ ಕೂಡ ತಯಾರಾಗುತ್ತಿದೆ. 4 ಅಡಿ ಅಗಲ, 12 ಅಡಿ ಎತ್ತರದ ಕಬ್ಬಿಣದ ಐದು ಹಲಗೆಗಳನ್ನು ತಯಾರು ಮಾಡಲಾಗಿದೆ. 48 ಟನ್ ತೂಕದ ಗೇಟ್ನ್ನು ಡ್ಯಾಂ ನಲ್ಲಿ ತೆಗೆದುಕೊಂಡು ಹೋಗಲು ಅಸಾಧ್ಯ. ಹೀಗಾಗಿ 5 ಭಾಗಗಳಲ್ಲಿ ಗೇಟ್ ಸಿದ್ಧತೆ ಕಾರ್ಯ ನಡೆಯಲಿದೆ.
ಗೇಟ್ ಅಳವಡಿಕೆ ಯಶಸ್ವಿಯಾದ್ರೆ ಅಪಾರ ಪ್ರಮಾಣದ ನೀರು ಜಲಾಶಯದಲ್ಲಿ ಉಳಿದಂತಾಗಲಿದೆ. ಡ್ಯಾಂನಿಂದ ನದಿಗಳ ಮೂಲಕ 22 ಟಿಎಂಸಿ ನೀರು ಹರಿದು ಹೋಗಿದೆ ಎಂದು ತಜ್ಞರು ಹೇಳಿದ್ದಾರೆ. ನೀರಿಗಿಳಿದು ದುರಸ್ತಿ ಕಾರ್ಯ ನಡೆಸಲು ಈಗ ಜಿಂದಾಲ್ ತಂಡ ಮುಂದೆ ಬಂದಿದೆ. ನೀರಿನ ರಭಸ ಜಾಸ್ತಿಯಾಗಿ ನೀರಿಗಿಳಿಯುವುದು ಅಸಾಧ್ಯವಾದರೆ, ಅರ್ಧ ನೀರು ಖಾಲಿ ಮಾಡಿ ಕೆಲಸ ಮಾಡಲು ನಿರ್ಧರಿಸಬಹುದು.