ಗದಗ: ಸಾರಿಗೆ ಬಸ್ (NWKRTC Bus) ಹಾಗೂ ಕಾರಿನ (Car) ಮಧ್ಯೆ ಭೀಕರ ಅಪಘಾತವೊಂದು ಸಂಭವಿಸಿದ್ದು, ನಾಲ್ವರು ಬಲಿಯಾಗಿರುವ ಘಟನೆ ನಡೆದಿದೆ.
ಈ ಭೀಕರ ಅಪಘಾತ (Accident) ನರಗುಂದದ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಘಟೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ದುರ್ದೈವಿಗಳನ್ನು ಹಾವೇರಿ ಮೂಲದ ರುದ್ರಪ್ಪ ಅಂಗಡಿ (55), ರಾಜೇಶ್ವರಿ (45), ಐಶ್ವರ್ಯ (16) ಹಾಗೂ ವಿಜಯ (12) ಎಂದು ಗುರುತಿಸಲಾಗಿದೆ. ರುದ್ರಪ್ಪ ಕುಟುಂಬ ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ನರಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.








