ಬೆಂಗಳೂರು: ಸಿಎಂ (Siddaramaiah) ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ.
ಸೋಮವಾರ ಬೆಳಿಗ್ಗೆ 11:30 ಕ್ಕೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಾವು ಕ್ಲೀನ್ ಕ್ಲೀನ್ ಅಂತಾರೆ. ಅದೇನು ಕ್ಲೀನೋ? ಕಳೆದ ಸಲ ಸಿದ್ದರಾಮಯ್ಯ ವಿರುದ್ಧ 65 ಕೇಸ್ ಇದ್ದವು. ಆದರೆ, ಎಲ್ಲ ಪ್ರಕರಣಗಳನ್ನು ಎಸಿಬಿ ಮೂಲಕ ಮುಚ್ಚಿ ಹಾಕಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ನವ್ರು ಸ್ವಾಗತಿಸಬೇಕಿತ್ತು. ತನಿಖೆಗೆ ಸೂಚಿಸಬೇಕಿತ್ತು ಎಂದು ಹೇಳಿದ್ದಾರೆ.
ಯಾವ ನೈತಿಕತೆ ಇಟ್ಕೊಂಡು ಸಿದ್ದರಾಮಯ್ಯ ಪರ ಎಲ್ಲ ಶಾಸಕರು ನಿಲ್ತಾರೆ..? ನಾಳೆ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ನಾವು ಪ್ರತಿಭಟನೆ ಮಾಡುತ್ತೇವೆ. ಜೆಡಿಎಸ್ -ಶಾಸಕರು ಕಳಿಸುವಂತೆ ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದ ಅಶೋಕ್, ರಾಜ್ಯಪಾಲರ ಕಟೌಟ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ಮೌನವಾಗಿದ್ದಾರೆ. ನಮ್ಮ ಪ್ರತಿಭಟನೆಗೆ ದೂರು ದಾಖಲು ಮಾಡುವ ಪೊಲೀಸರು ಈಗ ಕೈ ಕಟ್ಟಿ ಕೂತಿದ್ದಾರೆ ಎಂದು ಗುಡುಗಿದ್ದಾರೆ.








