ಮೈಸೂರು: ಇತ್ತೀಚೆಗೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಂಕಿತ ಪೊಲೀಸ್ ಅಧಿಕಾರಿಯಿಂದಾಗಿ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ಶಾಸಕ, ತಹಶೀಲ್ದಾರ್, ಪತ್ರಕರ್ತರು ಸೇರಿದಂತೆ ಇಡೀ ಆಡಳಿತಕ್ಕೆ ಆತಂಕ ಎದುರಾಗಿದೆ.
ಕಳೆದ ವಾರ ಹೆಚ್.ಡಿ ಕೋಟೆಯ ತಾಲೂಕು ಆಡಳಿತದಿಂದ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ತಹಶೀಲ್ದಾರ್ ಆರ್.ಮಂಜುನಾಥ್ ಸೇರಿ ಹಲವರು ಪಾಲ್ಗೊಂಡಿದ್ದರು. ಅದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗೆ ಈಗ ಕೊರೊನಾ ಪಾಸಿಟಿವ್ ಬಂದಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, 20 ಮಂದಿ ಪೊಲೀಸ್ ಸಿಬ್ಬಂದಿ, 6 ಮಂದಿ ಪತ್ರಕರ್ತನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಈ ಘಟನೆಯಿಂದಾಗಿ ಇಡೀ ಹೆಚ್.ಡಿ ಕೋಟೆ ತಾಲ್ಲೂಕಿಗೆ ಕೊರೊನಾ ಗ್ರಹಣ ಹಿಡಿದಂತಾಗಿದ್ದು, ತಾಲ್ಲೂಕಿನಲ್ಲಿ ಸೋಂಕಿನ ಭೀತಿ ಆವರಿಸಿದೆ.
ಜೆಡಿಎಸ್ನಿಂದ ಬಂದು ನಮ್ಮ ಮೇಲೆಯೇ ಸವಾರಿ ಮಾಡ್ತಾನೆ, ಇವನದ್ದೇ ದರ್ಬಾರ್ ಆಗಿದೆ: ಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ಸಚಿವ ಶಿವಲಿಂಗೇಗೌಡ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಏಕವಚನದಲ್ಲೇ ವಾಗ್ದಾಳಿ, ಹಾಸನ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ!
ನಾಡಿನ ಪ್ರಸಿದ್ಧ ಶಕ್ತಿದೇವತೆ ಹಾಸನಾಂಬೆ ಉತ್ಸವದ ಸಂಭ್ರಮದ ನಡುವೆಯೇ ಹಾಸನ ಜಿಲ್ಲಾ ಕಾಂಗ್ರೆಸ್ನೊಳಗಿನ ಭಿನ್ನಮತ ಬೀದಿಗೆ ಬಂದಿದ್ದು, ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವಿನ ಶೀತಲಸಮರ ಸ್ಫೋಟಗೊಂಡಿದೆ....








