ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara) ದರ್ಶನ್ಗೆ (Darshan) ವಿಶೇಷ ಆತಿಥ್ಯ ನೀಡಿರುವ ಕುರಿತು ಸಂಶಯ ವ್ಯಕ್ತವಾಗಿದ್ದು, ಈ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.
ತನಿಖೆಗೆ ಇಬ್ಬರು ಐಜಿಪಿಗಳ(Inspector- General Of Police) ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಕಾರಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ(Malini Krishnamurthy) ಆದೇಶ ಹೊರಡಿಸಿದ್ದಾರೆ. ಐಜಿಪಿ ಬಿ.ವಿ. ಆನಂದ್ ರೆಡ್ಡಿ ಹಾಗೂ ಐಜಿಪಿ ಸೋಮಶೇಖರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಹಿರಿಯ ಅಧಿಕಾರಿಗಳಿಗೆ 15 ದಿನಗಳ ಒಳಗಾಗಿ ಜೈಲಿನಲ್ಲಿ ದರ್ಶನ್ಗೆ ವಿಶೇಷ ಆತಿಥ್ಯ ನೀಡಿರುವ ಕುರಿತು ವರದಿ ನೀಡಲು ಸೂಚಿಸಲಾಗಿದೆ.
ಕೊಲೆ ಆರೋಪಿ ನಟ ದರ್ಶನ್ಗೆ ಜೈಲನ್ನೇ ರೆಸಾರ್ಟ್ ಮಾಡಿಕೊಟ್ಟಿರುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಈಗ ನಡುಕ ಶುರುವಾಗಿದೆ. ದರ್ಶನ್ಗೆ ರಾಜಾತಿಥ್ಯಕ್ಕೆ (Royal Treatment) ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ಮೇಲೆ ತೂಗುಕತ್ತಿ ತೂಗುತ್ತಿದೆ. ದರ್ಶನ್ ಮತ್ತು ರೌಡಿಗಳಿಗೆ ರಾಜಾತಿಥ್ಯ ನೀಡಿದವರು ಯಾರು? ಪೋಟೋ, ವಿಡಿಯೋ ಬಹಿರಂಗ ಆಗಿರುವ ಬಗ್ಗೆ ಆಂತರಿಕ ತನಿಖೆಯ ಬೇಟೆಗೆ ಹಿರಿಯ ಅಧಿಕಾರಿಗಳು ಸಜ್ಜಾಗಿದ್ದಾರೆ.
ವಿಶೇಷ ಆತಿಥ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳು ಯಾರು? ಹಣ ಪಡೆದು ದರ್ಶನ್ಗೆ ವಿಶೇಷ ಆತಿಥ್ಯ ಕೊಟ್ಟಿದ್ದಾರಾ? ಎಂಬಿತಾದಿ ವಿಚಾರದ ಬಗ್ಗೆ ತನಿಖೆ ಮಾಡಿ ಕಾರಗೃಹ ಇಲಾಖೆಯ ಡಿಜಿ.ಗೆ ವರದಿ ಸಲ್ಲಿಸಲಾಗುತ್ತದೆ. ಆನಂತರ ಉಳಿದ ಪ್ರಕ್ರಿಯೆ ನಡೆಯಲಿದೆ.








