ADVERTISEMENT
Sunday, May 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಮಹಾರಾಜ ಟೂರ್ನಿಯಿಂದ ಹೊರ ಬಿದ್ದ ಶಿವಮೊಗ್ಗ ಲಯನ್ಸ್!

ಫೈನಲ್ ಪ್ರವೇಶಿಸಿದ ಬೆಂಗಳೂರು ತಂಡ

Author2 by Author2
August 28, 2024
in Sports, ಕ್ರಿಕೆಟ್
Share on FacebookShare on TwitterShare on WhatsappShare on Telegram

ಮಹಾರಾಜ ಟ್ರೋಫಿಯಲ್ಲಿ ಬುಧವಾರ ಶಿವಮೊಗ್ಗ ಲಯನ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ತಂಡ ಗೆಲುವಿನ ನಗೆ ಬೀರಿದೆ. ಈ ಮೂಲಕ ಶಿವಮೊಗ್ಗ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ.

ಶಿವಮೊಗ್ಗ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದ ಬೆಂಗಳೂರು ತಂಡ ಟೇಬಲ್ ಟಾಪರ್ ಆಗಿ ಸೆಮಿಫೈನಲ್‌ ಪ್ರವೇಶಿಸಿದೆ. 227 ರನ್ಗಳ ಬೃಹತ್ ಟಾರ್ಗೆಟ್ ನೀಡಿದ ಹೊರತಾಗಿಯೂ ಸೋಲಿನ ಮೂಲಕ ಶಿವಮೊಗ್ಗ ಟೂರ್ನಿಯಿಂದ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 227 ರನ್ ಗಳಿಸಿತ್ತು.

Related posts

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

May 31, 2026
ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

May 27, 2026

ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡ ಶುಭಾಂಗ್ ಹಾಗೂ ಸೂರಜ್ ಅವರ ಅಜೇಯ 169 ರನ್ ಗಳ ಜೊತೆಯಾಟದಿಂದಾಗಿ 6 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಗೆಲಿನ ನಗೆ ಬೀರಿತು.

ಶಿವಮೊಗ್ಗ ತಂಡಕ್ಕೆ ಮತ್ತೆ ಆರಂಭಿಕರು ಕೈಕೊಟ್ಟರು. ನಾಯಕ ನಿಹಾಲ್ 12 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮತ್ತೊಬ್ಬ ಆರಂಭಿಕ ಪ್ರಭಾಕರ್ 16 ರನ್ ಗಳಿಗೆ ಪೆವಿಲಿಯನ್ ಸೇರಿದರು. 4 ಮತ್ತು 5ನೇ ವಿಕೆಟ್ಗೆ ಜೊತೆಯಾದ ಮೋಹಿತ್ ಹಾಗೂ ಅಭಿನವ್ ಅರ್ಧಶತಕದ ಜೊತೆಯಾಟ ನಡೆಸಿದರು. ಈ ವೇಳೆ ಮೋಹಿತ್ 38 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಗಳಿಸಿದರು.

ಆನಂತರ ಅಭಿನವ್ ಜೊತೆಯಾದ ರೋಹನ್ ಭರ್ಜರಿ ಆಟ ಪ್ರದರ್ಶಿಸಿದರು. 7 ಸಿಕ್ಸರ್ ಗಳನ್ನು ಸಿಡಿಸಿದ ಅಭಿನವ್ ಈ ಆವೃತ್ತಿಯಲ್ಲಿ ಸಿಕ್ಸರ್ಗಳಅರ್ಧಶತಕ ಪೂರೈಸಿದರು. ಒಟ್ಟಾರೆಯಾಗಿ ಈ ಆವೃತ್ತಿಯಲ್ಲಿ 500 ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಈ ಸಾಧನೆ ಮಾಡಿದ ಎರಡನೇ ಬ್ಯಾಟರ್ ಎಂಬ ದಾಖಲೆ ಬರೆದರು.
ಹಾಗೆಯೇ ಈ ಪಂದ್ಯದಲ್ಲಿ ಕೇವಲ 24 ಎಸೆತಗಳಲ್ಲಿ 59 ರನ್ ಚಚ್ಚಿದ ಅಭಿನವ್ ಆರೆಂಜ್ ಕ್ಯಾಪನ್ನು ಮತ್ತೆ ತಮ್ಮದಾಗಿಸಿಕೊಂಡರು. ಅಭಿನವ್ಗೆ ಸಾಥ್ ನೀಡಿದ ರೋಹನ್ ಕೂಡ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 45 ರನ್ ಗಳನ್ನು ಗಳಿಸಿದರು. ಈ ಮೂಲಕ ತಂಡ 227 ರನ್ಗಳ ಬೃಹತ್ ಮೊತ್ತ ಗಳಿಸಿತು.
ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಅಗ್ರಕ್ರಮಾಂಕ ಕೈಕೊಟ್ಟಿತು. ನಾಯಕ ಮಯಾಂಕ್ ಗಳಿಸಿದ 33 ರನ್ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಮೂಡಿಬರಲಿಲ್ಲ. ಹೀಗಾಗಿ ತಂಡದ ಸೋಲು ಖಚಿತವಾದಂತೆ ತೋರುತ್ತಿತ್ತು. ಆದರೆ ಐದು ಮತ್ತು ಆರನೇ ಕ್ರಮಾಂಕದಲ್ಲಿ ಜೊತೆಯಾದ ಶುಭಾಂಗ್ ಹಾಗೂ ಸೂರಜ್ ದಾಖಲೆಯ 169 ರನ್ಗಳ ಅಜೇಯ ಜೊತೆಯಾಟವನ್ನಾಡಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಶುಭಾಂಗ್ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 85 ರನ್ ಬಾರಿಸಿದರೆ, ಸೂರಜ್ 38 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸಿದರು.

Tags: #banglore final#shivmoga outCricketMaharaja Trophy
ShareTweetSendShare
Join us on:

Related Posts

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

ಟೈಟಾನ್ಸ್ ಅಟ್ಟಹಾಸವೋ ಅಥವಾ ಆರ್ ಸಿಬಿ ಅಬ್ಬರವೋ ಐಪಿಎಲ್ ಫೈನಲ್ ಗೆ ಕ್ಷಣಗಣನೆ ಆರಂಭ

by Shwetha
May 31, 2026
0

ಕ್ರಿಕೆಟ್ ಲೋಕದ ಅತಿದೊಡ್ಡ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಅಂತಿಮ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ...

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

ಧರ್ಮಶಾಲಾದಲ್ಲಿ ಆರ್ ಸಿಬಿ ಅಬ್ಬರ ಗುಜರಾತ್ ಟೈಟಾನ್ಸ್ ಧೂಳೀಪಟ ಮಾಡಿ ಸತತ ಎರಡನೇ ಬಾರಿಗೆ ಫೈನಲ್ ಗೇರಿದ ಹಾಲಿ ಚಾಂಪಿಯನ್ಸ್

by Shwetha
May 27, 2026
0

ಐಪಿಎಲ್ 2026ರ ಅಖಾಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯಯಾತ್ರೆ ಮುಂದುವರಿದಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್...

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

ಸೂರ್ಯ ಔಟ್, ಹೊಸ ನಾಯಕ ಇನ್?ರೇಸ್‌ನಲ್ಲಿರುವ ಆ 5 ಸ್ಟಾರ್ ಆಟಗಾರರು ಯಾರು?

by Shwetha
May 25, 2026
0

ಬೆಂಗಳೂರು: ಭಾರತೀಯ ಟಿ20 ಕ್ರಿಕೆಟ್ ತಂಡದಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸುತ್ತಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್...

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

RCB ಆಲ್ ರೌಂಡ್ ಪ್ರದರ್ಶನಕ್ಕೆ ಪಂಜಾಬ್ ಧೂಳೀಪಟ ಪ್ಲೇಆಫ್‌ಗೆ ಲಗ್ಗೆ ಇಟ್ಟ RCB

by Shwetha
May 18, 2026
0

ಐಪಿಎಲ್ 2026ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸರ್ವತೋಮುಖ...

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

ನಾನಿನ್ಯಾರಿಗೆ ಸಾಬೀತುಪಡಿಸಬೇಕು? 2027ರ ವಿಶ್ವಕಪ್ ಆಡ್ತಾರಾ ವಿರಾಟ್? ಕೊನೆಗೂ ಮೌನ ಮುರಿದು ಗುಟ್ಟು ಬಿಟ್ಟುಕೊಟ್ಟ ರನ್ ಮಷಿನ್

by Shwetha
May 17, 2026
0

ದಾಖಲೆಗಳ ಸರದಾರ, ಟೀಮ್ ಇಂಡಿಯಾದ ರನ್ ಮಷಿನ್ ಮತ್ತು ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಕಿಂಗ್ ವಿರಾಟ್ ಕೊಹ್ಲಿ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಕ್ರಿಕೆಟ್ ಭವಿಷ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram