ಲಕ್ನೋ: ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡು ಹಾರಿಸಲು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರಪ್ರದೇಶದ (Uttar Pradesh )ದ ಕೆಲವು ರಾಜ್ಯಗಳಲ್ಲಿ ತೋಳಗಳ ಹಾವಳಿ ಹೆಚ್ಚಾಗುತ್ತಿದ್ದು, (Man-Eating Wolves) ವಿಚಾರದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ (CM Yogi Adityanath Govt ) ಈ ಕುರಿತು ಘೋಷಿಸಿದೆ.
ಹೀಗಾಗಿ ಸರ್ಕಾರದಿಂದ ತೋಳಗಳ ಹತ್ಯೆಗೆ ಕಂಡಲ್ಲಿ ಗುಂಡಿಕ್ಕಲು (Shoot-at-Sight) ಆದೇಶ ನೀಡಲಾಗಿದೆ. ತೋಳದ ದಾಳಿಗೆ 9 ಮಕ್ಕಳು ಸೇರಿದಂತೆ 10 ಜನ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.