ಹೊಸದಿಲ್ಲಿ, ಜುಲೈ 5 : ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬದ್ಧತೆಯ ಸಲುವಾಗಿ ಭಾರತದ ಪ್ರಮುಖ ಬೈಸಿಕಲ್ ತಯಾರಕರಲ್ಲಿ ಒಂದಾದ ಹೀರೋ ಸೈಕಲ್ಸ್ ಚೀನಾದೊಂದಿಗೆ ಮುಂದಿನ ಮೂರು ತಿಂಗಳ ವ್ಯವಹಾರಕ್ಕೆ ಮಾಡಿಕೊಂಡಿದ್ದ 900 ಕೋಟಿ ರೂ.ಗಳ ಒಪ್ಪಂದವನ್ನು ರದ್ದುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
Hero Cycle becomes country’s ‘HERO’, Cancels Rs 900 crore trade deal with China. pic.twitter.com/NxYOMOroYJ
— NARINDER K. GUPTA (@jandialsales) July 3, 2020
ಹೀರೋ ಸೈಕಲ್ ಅಧ್ಯಕ್ಷ-ಕಮ್-ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಪಂಕಜ್ ಮುಂಜಾಲ್ ಅವರ ಪ್ರಕಾರ, ಕಂಪನಿಯು ಚೀನಾದೊಂದಿಗೆ 900 ಕೋಟಿ ರೂ. ವ್ಯವಹಾರ ನಡೆಸಲು ನಿರ್ಧರಿಸಲಾಗಿತ್ತು .ಆದರೆ ಆ ಯೋಜನೆಗಳನ್ನು ರದ್ದುಗೊಳಿಸುತ್ತಿದ್ದೇವೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ನಮ ಕಂಪನಿಯ ಬದ್ಧವಾಗಿದೆ ಎಂದು ಅವರು ಹೇಳಿದರು.
ಚೀನಾದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿದ ನಂತರ, ಕಂಪನಿಯು ಈಗ ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ ಮತ್ತು ಜರ್ಮನಿ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀರೋ ಸೈಕಲ್ಸ್ ತನ್ನ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಯುರೋಪಿಯನ್ ರಾಷ್ಟ್ರದಲ್ಲಿ ಸ್ಥಾವರವನ್ನು ಸ್ಥಾಪಿಸಲು ಯೋಜಿಸುತ್ತಿದೆ.








