ಸಚಿನ್ ಔಟ್ ಮಾಡಲು ಎಷ್ಟು ಟೀಮ್ ಮೀಟಿಂಗ್ ಮಾಡಿದ್ದೇನೆ ಎಂಬುದೇ ನೆನಪಿಲ್ಲ – ನಾಸೀರ್ ಹುಸೇನ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಅವರು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಬ್ಯಾಟಿಂಗ್ ತಾಂತ್ರಿಕತೆಯ ಬಗ್ಗೆ ಮಾತನಾಡಿದ್ದಾರೆ. ಭಾರತ ಇಂಗ್ಲೆಂಡ್ ವಿರುದ್ಧ ಆಡುವಾಗ ದೊಡ್ಡ ಚಿಂತೆಯಾಗಿದ್ದೇ ಸಚಿನ್ ತೆಂಡುಲ್ಕರ್. ಸಚಿನ್ ತೆಂಡುಲ್ಕರ್ ಅವರನ್ನು ಯಾವ ರೀತಿ ಔಟ್ ಮಾಡಬೇಕು ಎಂಬುದರ ಬಗ್ಗೆ ಲೆಕ್ಕವಿಲ್ಲದಷ್ಟು ಭಾರೀ ಟೀಮ್ ಮೀಟಿಂಗ್ ಮಾಡಿದ್ದೇವೆ ಎಂಬುದೇ ಗೊತ್ತಿಲ್ಲ ಅಂತ ನಾಸೀರ್ ಹುಸೇನ್ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಈ 24 ವರ್ಷಗಳಲ್ಲಿ ಮಾಡಿರುವಂತಹ ದಾಖಲೆ ಹಾಗೂ ಸಾಧನೆಗಳು ಅಷ್ಟಿಷ್ಟಲ್ಲ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ರನ್, ಗರಿಷ್ಠ ಶತಕಗಳು ಸೇರಿದಂತೆ ಹಲವಾರು ದಾಖಲೆಗಳು ಸಚಿನ್ ಹೆಸರಿನಲ್ಲಿವೆ.
ನಾನು ಒಟ್ಟಾರೆ ವಿಶ್ವ ಕ್ರಿಕೆಟ್ ನ ಬ್ಯಾಟ್ಸ್ ಮೆನ್ಗಳ ಬಗ್ಗೆ ಹೇಳುವುದಾದ್ರೆ ಸಚಿನ್ ತೆಂಡುಲ್ಕರ್ ಅವರಲ್ಲಿ ಅದ್ಭುತವಾದ ಬ್ಯಾಟಿಂಗ್ ತಾಂತ್ರಿಕತೆಗಳಿದ್ದವು. ನಾನು ಇಂಗ್ಲೆಂಡ್ ನಾಯಕನಾಗಿದ್ದಾಗ ಅದೆಷ್ಟೋ ಬಾರಿ ಸಚಿನ್ ತೆಂಡುಲ್ಕರ್ ಅವರನ್ನು ಔಟ್ ಮಾಡುವುದರ ಬಗ್ಗೆ ಟೀಮ್ ಮೀಟಿಂಗ್ ಮಾಡಿದ್ದೇವೆ ಎಂಬುದು ಅಂತ ನಾಸೀರ್ ಹುಸೇನ್ ಹೇಳಿದ್ದಾರೆ.
ಇಯಾನ್ ಬಿಷಪ್, ಎಲ್ಮಾ ಸ್ಮಿತ್ ಜೊತೆಗಿನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಾಸೀರ್ ಹುಸೇನ್, ಸದ್ಯದ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್ ಥರಾ ತಾಂತ್ರಿಕತೆಯ ಆಟದಂತೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಲ್ಲಿ ಕಾಣಬಹುದಾಗಿದೆ ಎಂದು ನಾಸೀರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.