ರಾಜ್ಯದಲ್ಲಿ ಮುಂದುವರಿದ ಕೊರೊನಾರ್ಭಟ – ಭಾನುವಾರ ರಾಜ್ಯದಲ್ಲಿ 1925 ಹೊಸ ಪ್ರಕರಣ
ಬೆಂಗಳೂರು, ಜುಲೈ 6: ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಯು ದಿನೇ ದಿನೇ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ. ಶನಿವಾರ ಸಂಜೆಯಿಂದ ಭಾನುವಾರ ಸಂಜೆಯ ವರೆಗೆ ರಾಜ್ಯದಲ್ಲಿ 1925 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 23,474ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಭಾನುವಾರ ಕೂಡ 1235 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯ ರಾಜಧಾನಿ ಕೊರೊನಾರ್ಭಟಕ್ಕೆ ಬೆಚ್ಚಿ ಬಿದ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 37 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಇಲ್ಲಿಯವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 372ಕ್ಕೆ ಏರಿಕೆ ಕಂಡಿದೆ.

ರಾಜ್ಯ ಆರೋಗ್ಯ ಇಲಾಖೆ ಭಾನುವಾರ ಸಂಜೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಬೆಂಗಳೂರು-1235, ದಕ್ಷಿಣ ಕನ್ನಡ-147, ಬಳ್ಳಾರಿ-90, ವಿಜಯಪುರ-51, ಕಲಬುರಗಿ-49, ಉಡುಪಿ, ಧಾರವಾಡ ತಲಾ 45, ಬೀದರ್-29, ಮೈಸೂರು-25, ಕೊಪ್ಪಳ-22, ಉತ್ತರ ಕನ್ನಡ-21, ಚಾಮರಾಜನಗರ- 19, ಹಾವೇರಿ-15, ಹಾಸನ-14, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ತಲಾ 13, ಬೆಳಗಾವಿ, ದಾವಣಗೆರೆ ತಲಾ 11, ರಾಯಚೂರು, ಮಂಡ್ಯ ತಲಾ 10, ಚಿಕ್ಕಮಗಳೂರು-9, ಶಿವಮೊಗ್ಗ-8, ಗದಗ-7, ರಾಮನಗರ-6, ಬಾಗಲಕೋಟೆ-4, ಚಿತ್ರದುರ್ಗದಲ್ಲಿ ಮೂರು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.








