ಸುರತ್ಕಲ್ : ಇಂದು ಇದ್ ಮಿಲಾದ್ ಹಬ್ಬವಿದ್ದು, ಮಸೀದಿಯೊಂದಕ್ಕೆ ಕಲ್ಲು ಎಸದಿರುವ ಘಟನೆ ನಡೆದಿದೆ.
ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಹತ್ತಿರ ಭಾನುವಾರ ಈ ಘಟನೆ ನಡೆದಿದೆ. ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಬಳಿ ಇರುವ ಮಸೀದಿಗೆ ಬೈಕ್ ನಲ್ಲಿ ಬಂಡ ಕಿಡಿಗೇಡಿಗಳ ತಂಡವೊಂದು ಕಲ್ಲು ಬಿಸಾಡಿ ಸ್ಥಳದಿಂದ ಪರಾರಿಯಾಗಿರುವುದಾಗಿ ಹೇಳಲಾಗಿದೆ.
ಕೂಡಲೇ ಸ್ಥಳಕ್ಕೆ ಪಣಂಬೂರು ಎಸಿಪಿ ಮನೋಜ್ ಕುಮಾರ್ ಹಾಗೂ ಸುರತ್ಕಲ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸಿದ್ದಾರೆ.