ಮಡಿಕೇರಿ: ಇಂದು ಭಾರತದ ಶ್ರೇಷ್ಠ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಇಂದು ಜನಿಸಿದ ಗಂಡು ಮಗುವಿಗೆ ದಂಪತಿ‘ನರೇಂದ್ರ’ ಎಂದು ನಾಮಕರಣ ಮಾಡಿದ್ದಾರೆ.
ಈ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರ ನಗರದಲ್ಲಿ ನಡೆದಿದೆ. ನಗರ ನಿವಾಸಿಗಳಾದ ಜಯಲಕ್ಷ್ಮೀ ಹಾಗೂ ಮಹೇಂದ್ರ ಎಂಬುವವರಿಗೆ ಇಂದು ಗಂಡು ಮಗು ಜನಿಸಿದೆ. ಕಳೆದ ಎರಡು ದಿನಗಳ ಹಿಂದೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಜಯಲಕ್ಷ್ಮೀ ದಾಖಲಾಗಿದ್ದರು.
ಇಂದು ಬೆಳಿಗ್ಗೆ 8ಕ್ಕೆ ಆಸ್ಪತೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿಗಳು ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟಿದ್ದಾರೆ. ಈ ವೇಳೆ ಮಾತನಾಡಿರುವ ತಂದೆ ಮಹೇಂದ್ರ, ದೇಶದ ಪ್ರಧಾನಿಯಂತೆ ನಮ್ಮ ಮಗು ಬೆಳೆದು ನಾಡಿಗೆ ಒಳಿತು ಮಾಡಲಿ. ಮಗು ಉನ್ನತ ಮಟ್ಟದ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ. ಈ ವೇಳೆ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶುಭ ಕೋರಿ ಮಗುವಿಗೆ ಒಂದು ಗ್ರಾಂ ಚಿನ್ನದ ಉಂಗುರವನ್ನು ತೊಡಿಸಿ ಆಸ್ಪತ್ರೆ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜೆ.ಬೋಪ್ಪಯ್ಯ ಮಾತನಾಡಿ, ಮೋದಿ ಜನ್ಮದಿನದಂದು ಜನ್ಮ ತಾಳಿದ ಪುತ್ರನಿಗೆ ‘ನರೇಂದ್ರ’ ಎಂದು ಹೆಸರು ಇಟ್ಟಿರುವುದಕ್ಕೆ ದಂಪತಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಶಬರಿಮಲೆಗೆ ಪಾದಯಾತ್ರಿಗಳಿಗೆ ಗುಡ್ ನ್ಯೂಸ್ ವಿಶೇಷ ದರ್ಶನ ವ್ಯವಸ್ಥೆ!
ತಿರುವನಂತಪುರಂ: ಶಬರಿಮಲೆಗೆ ಸಾಂಪ್ರದಾಯಿಕ ಕಾಡು ದಾರಿಯಲ್ಲಿ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗೆ ಶೀಘ್ರದಲ್ಲೇ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿರುವಾಂಕೂರ್ ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್...