ಮಂಡ್ಯ: ನನಗೆ ಹಾಗೂ ಮುಡಾ ಹಗರಣಕ್ಕೂ ಸಂಬಂಧವೇ ಇಲ್ಲ. ಹೀಗಾಗಿ ನಾನೇಕೆ ರಾಜೀನಾಮೆ ನೀಡಬೇಕು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ವಿಚಾರವಾಗಿ ಒತ್ತಾಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣಕ್ಕೂ ನನಗೂ ಏನು ಸಂಬಂಧ? ಕನ್ನಡ ಓದೋಕೊ ಬರುತ್ತೋ, ಇಂಗ್ಲಿಷ್ ಓದೋಕೊ ಬರುತ್ತೋ ಕೇಳಿ. ಮೊದಲು ಆ ಪೇಪರ್ನಲ್ಲಿ ಏನಿದೆ ಎಂಬುವುದನ್ನು ಕುಳಿತು ಓದಲು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರೇನೂ ಹುಚ್ಚರಾ ರಾಜೀನಾಮೆ ಕೇಳವುದಕ್ಕೆ. ಅವರು ಕೇಳಿದರೂ ಅಂತಾ ನಾನು ರಾಜೀನಾಮೆ ಕೊಡಬೇಕು? ಯಾಕೆ ರಾಜೀನಾಮೆ ಕೊಡಬೇಕು? ಏನು ತಪ್ಪು ಮಾಡಿದ್ದೇನೆ? ದಾಖಲೆಗಳನ್ನು ಅವರು ಸರಿಯಾಗಿ ನೋಡಿದ್ದರಾ? ಯಾವನೋ ಬರೆದುಕೊಟ್ಟಿದ್ದಾನೆ ಅದನ್ನು ಬಂದು ತುತ್ತೂರಿ ಊದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.