ಬೆಂಗಳೂರಿನಿಂದ ಮಂಡ್ಯ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಮಂಡ್ಯ ಗಡಿಯಲ್ಲಿ ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಹಿಂದುಪರ ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮೈಸೂರಿನಲ್ಲಿ ಚಿಕಿತ್ಸೆಗಾಗಿ ವೈದ್ಯರ ಬಳಿ ಅಪಾಯಿಂಟ್ ಮೆಂಟ್ ಪಡೆದಿದ್ದ ಮುತಾಲಿಕ್ ಅದನ್ನು ತೋರಿಸಿದರೂ ಪೊಲೀಸರು ಮಂಡ್ಯ ಜಿಲ್ಲೆ ಪ್ರವೇಶ ಇಲ್ಲ ಎಂದು ತಡೆದಿದ್ದಾರೆ.
ಆಗ ಸ್ಥಳದಲ್ಲಿದ್ದ ಭಜರಂಗ ಸೇನೆ ಸಂಸ್ಥಾಪನಾ ಅಧ್ಯಕ್ಷ ಮಂಜುನಾಥ್ ಕೂಡ ಪೊಲೀಸರ ನಡೆ ಖಂಡಿಸಿದರು. ಈ ವೇಳೆ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು.








