ಗಾಂಧಿನಗರ: ಮನೆಯ ಅಂಗಳದಲ್ಲಿ ಆಡುತ್ತಿದ್ದ 10 ತಿಂಗಳ ಮಗುವನ್ನು ಕಾಮುಕನೊಬ್ಬ ಹೊತ್ತೊಯ್ದು ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಗುಜರಾತ್ ನ ಭರೂಚ್ ನ ಪನೋಳಿ ಗ್ರಾಮದಲ್ಲಿ ನಡೆದಿದೆ. ದೀಪಕ್ ಕುಮಾರ್ ಲಾಲ್ಬಾಬು ಸಿಂಗ್ (30) ಎಂದು ಗುರುತಿಸಲಾಗಿದೆ. ಆರೋಪಿ ಮಗುವನ್ನು ತನ್ನ ಮನೆಗೆ ಕರೆದೊಯ್ಯುವಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಓಜಾ ಹೇಳಿದ್ದಾರೆ.
ಆರೋಪಿಯು ಮಗುವಿನ ಕುಟುಂಬದ ಪರಿಚಯಸ್ಥನಾಗಿದ್ದು, ಮಗುವಿನೊಂದಿಗೆ ಸಲುಗೆಯಿಂದ ಇದ್ದ. ಮಗು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, ಆರೋಪಿ ಅವಳನ್ನು ಕರೆದೊಯ್ದು ಮನೆಯಿಂದ ಅನತಿ ದೂರದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಮಗು ಅಳುವುದನ್ನು ಕೇಳಿದ ಅಜ್ಜಿ, ಮಗುವಿನ ಬಳಿ ಬಂದಾಗ ಮಗುವಿಗೆ ರಕ್ತಸ್ರಾವವಾಗಿದ್ದು, ಗಾಯಗೊಂಡಿರುವುದನ್ನು ಗಮನಿಸಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಿಎನ್‍ಎಸ್‍ಎಸ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗುವನ್ನು ಭರೂಚ್‍ನ ಆಸ್ಪತ್ರೆಗೆ ದಾಖಲಿಸಲಾಗಿದೆ.








