ವಿದ್ಯಾರ್ಥಿನಿ ಇದ್ದ ಮನೆಯಲ್ಲಿ ಮಾಲೀಕನ ಮಗ ಕ್ಯಾಮರಾ ಅಳವಡಿಸಿ ಸಿಕ್ಕಿಬಿದ್ದಿದ್ದಾನೆ.
ವಿದ್ಯಾರ್ಥಿನಿ ಯುಪಿಎಸ್ಸಿ ತಯಾರಿ ನಡೆಸಿದ್ದ ಯುವತಿ ದೆಹಲಿಯ ಶಕರ್ ಪುರದ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಅಲ್ಲದೇ, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಮನೆಯ ಮಾಲೀಕನ ಮಗ ವಾಸವಾಗಿದ್ದ. ಒಂದು ಬಾರಿ ಆಕೆ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುವಾಗ ಮನೆಯ ಕೀಗಳನ್ನು ಆತನಿಗೆ ನೀಡಿ ಹೋಗಿದ್ದಳು.
ಆನಂತರ ಅವಳು ಮರಳಿ ಬಂದಾಗ ಅವಳ ವಾಟ್ಸಾಪ್ ಬೇರೊಂದು ಲ್ಯಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಇದನ್ನು ನೋಡಿ ಶಾಕ್ ಆಗಿದ್ದಳು.
ಆನಂತರ ತನ್ನ ಮೇಲೆ ಯಾರೋ ಕಣ್ಣಿಟ್ಟಿದ್ದಾರೆಂದು ಅರಿತು ಮನೆಯನ್ನೆಲ್ಲ ಜಾಲಾಡಿದ್ದಾಳೆ. ಆ ವೇಳೆ ಕೊಠಡಿಯ ಬಾತ್ ರೂಂನ ಬಲ್ಬ್ ಹೋಲ್ಡರ್ ನಲ್ಲಿ ಕ್ಯಾಮೆರಾ ಅಳವಡಿಸಿರುವುದು ಕಂಡು ಬಂದಿದೆ. ಕೂಡಲೇ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ವಿಚಾರಣೆ ನಡೆಸಿದಾಗ ಮನೆಯ ಮಾಲೀಕನ ಕೃತ್ಯ ಬೆಳಕಿಗೆ ಬಂದಿದೆ.
ಕರಣ್ ಎಂಬಾತ ಯುವತಿ ಇಲ್ಲದಾಗ ಮನೆಗೆ ನುಗ್ಗಿ ಬಾತ್ರೂಂ ಹಾಗೂ ಕೋಣೆಯಲ್ಲಿ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.ಆ ಕ್ಯಾಮರಾಗಳಲ್ಲಿ ಮೆಮೊರಿ ಚಿಪ್ ಕೂಡ ಇತ್ತು. ಹೀಗಾಗಿ ಆನ್ಲೈನ್ ಮೂಲಕ ವೀಕ್ಷಿಸುತ್ತಿದ್ದ ಚಿಪ್ ಗಳನ್ನು ಪಡೆಯಲು ಆರೋಪಿ ಕರಣ್ ವಿದ್ಯುತ್ ರಿಪೇರಿ ಮಾಡುವ ನೆಪದಲ್ಲಿ ಆಕೆಯ ಕೋಣೆಗೆ ಆಗಾಗ ಹೋಗುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಕಾರ್ಡ್ ಮಾಡಿದ ವಿಡಿಯೋ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.








