ಬೆಂಗಳೂರು: ಕೊಲೆ ಮಾಡಿ 59 ಪೀಸ್ ಮಾಡಿ, ಫ್ರಿಜ್ ನಲ್ಲಿ ಇಟ್ಟಿದ್ದ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಭಯಾನಕ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಪ್ರಕರಣಕ್ಕೆ ಸಂಬಂಧಿಸಿದ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ.ಆರೋಪಿಯು ಕೊಲೆ ಮಾಡಿದ ನಂತರ ತನ್ನ ಬೈಕ್ ನಲ್ಲೇ ಮೂರು ರಾಜ್ಯಗಳನ್ನು ಮೂರು ದಿನಗಳ ಕಾಲ ದಾಟಿ ತನ್ನ ಊರು ಸೇರಿದ್ದ ಎಂದು ತಿಳಿದು ಬಂದಿದೆ.
ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ಮಹಾಲಕ್ಷ್ಮಿ ಕೊಲೆ ಮಾಡಿದ್ದ ಹಂತಕ, ಅರೆಸ್ಟ್ ಆಗುವುದಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರೋಪಿ ಮುಕ್ತಿ ರಾಜನ್ ರಾಯ್ ಹುಟ್ಟೂರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಗ್ರಾಮ ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ, ಸಾಯುವ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಹಂತಕ ಮಹಾಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ನಾನು ಸ್ಟೋರ್ ಮ್ಯಾನೇಜರ್ ಆಗಿದ್ದೆ. ಇಬ್ಬರೂ ಸ್ನೇಹಿತರು. ನಾವಿಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದೇವು ಎಂದು ಬರೆದುಕೊಂಡಿದ್ದ.
ಹಂತಕ ಸೆ.2 ರಂದು ಮಹಾಲಕ್ಷ್ಮಿಯ ಮನೆಗೆ ತೆರಳಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಮದುವೆ ಆಗು ಎಂದು ಮಹಾಲಕ್ಷ್ಮೀ ಪೀಡಿಸಿದಾಗ ನಿನಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಲೀವಿಂಗ್ ರಿಲೇಶನ್ನಲ್ಲೇ ಇರೋಣ ಎಂದು ಹೇಳಿದ್ದಾನೆ. ಆಗ ಮಹಾಲಕ್ಷ್ಮೀ ರಂಜನ್ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಆಗ ಕೋಪದಿಂದ ಮಹಾಲಕ್ಷ್ಮಿ ಕಪಾಳಕ್ಕೆ ಮುಕ್ತಿ ಹೊಡೆದಾಗ ಪ್ರಜ್ಞೆ ತಪ್ಪಿ ಮಹಾಲಕ್ಷಿ ಬಿದ್ದಿದ್ದಾಳೆ.
ಪ್ರಜ್ಞೆ ತಪ್ಪಿ ಬಿದ್ದ ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಆನಂತರ ಆ್ಯಕ್ಸೆಲ್ ಬ್ಲೇಡ್ ಮತ್ತು ಚಾಕು ಖರೀದಿಸಿ ಹಾಲ್ನಲ್ಲಿದ್ದ ಶವವನ್ನ ಸ್ನಾನದ ಮನೆಗೆ ಎಳೆದೊಯ್ದು 59 ಪೀಸ್ ಗಳನ್ನಾಗಿ ಕತ್ತರಿಸಿದ್ದಾನೆ. ಆ ನಂತರ ಹೆಬ್ಬಗೋಡಿಯ ಸಹೋದರನ ಮನೆಗೆ ಹೋಗಿ ನಡೆದ ಕೃತ್ಯ ಹೇಳಿದ್ದಾನೆ.
ಬಳಿಕ ತನ್ನ ಬೈಕ್ ನಲ್ಲೇ ಮೂರು ದಿನಗಳ ಕಾಲ 1,550 ಕಿಮೀ ಸಂಚರಿಸಿ ಕರ್ನಾಟಕ, ಆಂಧ್ರ, ಒಡಿಶಾ ಕ್ರಾಸ್ ಮಾಡಿ ತನ್ನೂರಾದ ಬೋನಿಪುರಕ್ಕೆ ಹೋಗಿದ್ದಾನೆ. ಇತ್ತ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಆದರೆ, ಅಷ್ಟರಲ್ಲಿ ಆರೋಪಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.








