ಸಿಎಂ ಸಿದ್ದರಾಮಯ್ಯ ಅವರು ಆತ್ಮ ಸಾಕ್ಷಿಯ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಏನಾದರೂ ಆತ್ಮಸಾಕ್ಷಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ ಎಂದು ವಿಪ ಸದಸ್ಯ ರವಿಕುಮಾರ್ ಕಲಬುರಗಿಯಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ ಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ಕುಟುಂಬ ತಪ್ಪು ಮಾಡಿದ್ದಾರೆ ಅಂತಾ ತೀರ್ಪು ಕೊಟ್ಟಿದೆ. ತನಿಖೆಗೆ ಸೂಕ್ತ ಎಂದು ಕೋರ್ಟ್ ಎಫ್ ಐಆರ್ ಗೆ ಸೂಚನೆ ನೀಡಿದೆ. ಇಷ್ಟೆಲ್ಲ ಆದರೂ ನಾನು ತಪ್ಪು ಮಾಡಿಲ್ಲ ಎಂದು ಸಿಎಂ ಹೇಳುತ್ತಾರೆ.
ಅವರು ತಪ್ಪು ಮಾಡಿದ್ದಕ್ಕೆ 14 ಸೈಟ್ ಗಳನ್ನು ಮರಳಿ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಆತ್ಮ ಸಾಕ್ಷಿ ಇದ್ದರೆ ಮೊದಲು ರಾಜೀನಾಮೆ ನೀಡಲಿ. ಆತ್ಮಸಾಕ್ಷಿಗಿಂತ ದೊಡ್ಡ ನ್ಯಾಯಾಲಯ ಇಲ್ಲ ಆಂತಾರೆ. ಹಾಗಾದರೆ ನ್ಯಾಯಾಲಯದ ತೀರ್ಪು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
ತಪ್ಪು ಮಾಡಿಲ್ಲ ಅಂತಾ ಹೇಳ್ತಾ ಹೂಬ್ಲೆಟ್ ವಾಚ್ ವಾಪಸ್ ಕೊಟ್ಟರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು 89 ಕೋಟಿ ರೂ. ಅಂತಾ ಒಪ್ಪಿಕೊಂಡರು. ಈಗ 14 ಸೈಟ್ ಮರಳಿ ನೀಡಿದ್ದಾರೆ. ಅವರ ಮಗನಿಂದ ವಾಪಾಸ್ ಕೊಟ್ಟಿದ್ದಾರೆ. ಕಮೀಷನರ್ ರಘುನಂದನ್ ಅವನ್ನು ಪಡೆದಿದ್ದಾರೆ. ಈ ಸರ್ಕಾರದಲ್ಲಿ ಅತ್ಯಂತ ವೇಗವಾಗಿ ಆಗಿರುವ ಕೆಲಸ ಅಂದ್ರೆ, ಇದೊಂದೆ ಎಂದು ವ್ಯಂಗ್ಯವಾಡಿದ್ದಾರೆ.
ವಿಷಯ ಕೋರ್ಟ್ ನಲ್ಲಿದ್ದರೂ ಅಧಿಕಾರಿ ಸೈಟ್ ಗಳನ್ನು ಪಡೆದಿದ್ದಾರೆ. ಹೀಗಾಗಿ ಕೂಡಲೇ ರಘುನಂದನ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.








