ರಾಯಚೂರು: ಕುಮಾರಸ್ವಾಮಿಗೆ (HD Kumaraswamy) ಸಂಪೂರ್ಣ ಹುಚ್ಚು ಹಿಡಿದಿದೆ. ಹೀಗಾಗಿ ಬಾಯಿಗೆ ಬಂದಂತೆ ಒದರುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು (NS Bosaraju) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) 14 ಸೈಟ್ ಗಳನ್ನ ನೀಡಿದ್ದಾರೆ. ಈಗ ಮರಳಿ ನೀಡಿದ ನಂತರ ಕುಮಾರಸ್ವಾಮಿಗೆ ಮಾತನಾಡಲು ವಿಷಯವಿಲ್ಲ. ಹೀಗಾಗಿ ಒದರುತ್ತಿದ್ದಾರೆ ಎಂದಿದ್ದಾರೆ.
ಮುಡಾ ವಿಷಯ ಮುಂದಿಟ್ಟುಕೊಂಡು ನನ್ನ ಪತಿ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪಾರ್ವತಿ ಸಿದ್ದರಾಮಯ್ಯ ಅವರು 14 ಸೈಟ್ ಗಳನ್ನು ಮರಳಿ ನೀಡಿದ್ದಾರೆ. ಮನನೊಂದು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುತ್ತೇನೆ ಎಂದು ಸೈಟ್ ಸರೆಂಡರ್ ಮಾಡಿದ್ದಾರೆ. ಇದಕ್ಕೆ ಹೇಗೆ ಸರೆಂಡರ್ ಮಾಡಿದರೂ ಎಂದು ಕುಮಾರಸ್ವಾಮಿ ಕೇಳ್ತಾರೆ. ಅಶೋಕನನ್ನು ಕೇಳಿದರೆ ನಾನು ಆವಾಗಲೇ ಜಾಗವನ್ನು ಮರಳಿಸಿದ್ದೇನೆ ಎನ್ನುತ್ತಾರೆ. ಅವರು ವಿರೋಧ ಪಕ್ಷದ ನಾಯಕರು ಇವರು ಕೇಂದ್ರ ಸಚಿವರು. ಇವರಿಗೆ ಯಾವ ರೀತಿಯ ಬದ್ಧತೆಯಿದೆ. ಜವಾಬ್ದಾರಿಯಿದೆ ಎಂಬುವುದು ಅವರ ಮಾತುಗಳಿಂದ ತಿಳಿಯುತ್ತಿದೆ ಎಂದು ಗುಡುಗಿದ್ದಾರೆ.
ಕುಮಾರಸ್ವಾಮಿ ವಿರುದ್ಧ 50 ಕೋಟಿ ರೂ. ಲಂಚದ ಆರೋಪವಿದೆ. ವಿಥ್ ರೆಕಾರ್ಡ್ ಕೇಸ್ ದಾಖಲಾಗಿದೆ. ಅಶೋಕ್ ಮೇಲೆ ಎಫ್ಐಆರ್ ಆಗಿದೆ. ಯಡಿಯೂರಪ್ಪ ಮೇಲೆ ನೂರಾರು ಕೇಸ್ ಇವೆ.ಇದಕ್ಕೆಲ್ಲ ಇವರು ಉತ್ತರ ನೀಡಲಿ ಎಂದು ಗುಡುಗಿದ್ದಾರೆ.