ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ನಾನು 14 ತಿಂಗಳಲ್ಲಿ ಮಾಡಿರುವ ಕೆಲಸದ ಕುರಿತು ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಅವರೇನು ಮಾಡಿದ್ದಾರೆ ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಅಂದಿದ್ದಾರೆ. ಯಾವ ಕುದುರೆ ಕೊಟ್ಟಿದ್ರು ಅವರು ನನಗೆ? ನಾನು 14 ತಿಂಗಳಲ್ಲಿ ಮಾಡಿದ ಕೆಲಸ ಬಗ್ಗೆ ಸಿದ್ದರಾಮಯ್ಯಗೆ ಚಾಲೆಂಜ್ ಮಾಡ್ತೀನಿ. ನಾನು ಬಹಿರಂಗ ಸವಾಲು ಹಾಕುತ್ತೇನೆ. ನಾನು ಮಾಡಿದ ಕೆಲಸ ಹಾಗೂ ಅವರು ಮಾಡಿದ ಕೆಲಸದ ಬಗ್ಗೆ ಚರ್ಚೆಯಾಗಲಿ ಎಂದಿದ್ದಾರೆ.
ಮಾತು ಮಾತಿಗೆ ಹೊಟ್ಟೆ ಉರಿ ಅಂತಿದ್ದಾರೆ. ಅವರೇ ಅವರ ಪತ್ನಿಯನ್ನು ಹೊರಗೆ ತಂದವರು. ಮನೆಯಲ್ಲಿ ಗೌರವದಿಂದ ಇದ್ದವರನ್ನು ಹೊರಗೆ ತಂದಿದ್ದು ಅವರು. ನಿಮ್ಮ ನಡವಳಿಕೆಯಿಂದ ಅವರು ಹೊರಗೆ ಬಂದಂತಾಗಿದೆ. ನೀವೇ ತಪ್ಪು ಮಾಡಿ ಇಂತಹ ವಿಷಯಗಳನ್ನೆಲ್ಲ ಯಾಕೆ ಜನರ ಮುಂದೆ ಹೇಳ್ತೀರ ಎಂದು ಗುಡುಗಿದ್ದಾರೆ.
ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಎಲ್ಲದರಲ್ಲೂ ಸರ್ಕಾರ ವಿಫಲವಾಗಿದೆ. ಹಲವು ಕುಟುಂಬಗಳ ಮನೆಗಳು ಜಲಾವೃತ ಆಗಿವೆ. ಮಳೆಯಿಂದಾಗಿ ಸಾಕಷ್ಟು ಅನಾಹುತವಾಗಿವೆ. ಆದರೂ ಈ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಗುಡುಗಿದ್ದಾರೆ.