ಆಗ್ರಾ : ಭಾರತದ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮದಾಬಾದ್ ನಲ್ಲಿ ನಡೆದ ನಮಸ್ತೆ ಕಾರ್ಯಕ್ರಮದ ಬಳಿಕ ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಗೆ ಭೇಟಿ ನೀಡಿ ಅಲ್ಲಿನ ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು. ಪತ್ನಿ ಮೆಲಾನಿಯಾ ಅವರೊಂದಿಗೆ ಪ್ರೇಮಸೌಧದಲ್ಲೇ ಟ್ರಂಪ್ ಕೆಲಕಾಲ ಸಮಯ ಕಳೆದರು.
ತಾಜ್ ಮಹಲ್ ಪ್ರವೇಶಿಸುತ್ತಲೇ ಮೊದಲಿಗೆ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ತಮ್ಮ ಸಂದೇಶವನ್ನು ಹಂಚಿಕೊಂಡರು. ತಾಜ್ ಮಹಲ್ ಒಂದು ವಿಸ್ಮಯವಾಗಿದೆ. ಭಾರತ ಸಂಸ್ಕೃತಿಯಲ್ಲಿನ ವಿವಿಧೆತೆಯ ಸೌಂದರ್ಯ ಮತ್ತು ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆಯಾಗಿದೆ. ಧನ್ಯವಾದ ಭಾರತ ಎಂದು ಟ್ರಂಪ್ ಬರೆದಿದ್ದಾರೆ.
ಪ್ರೇಮ ವೈಫಲ್ಯದಿಂದ ಬಯಲಾಯ್ತು MPSC ಪ್ರಶ್ನೆಪತ್ರಿಕೆ ಸೋರಿಕೆ ಜಾಲ; ಪ್ರಿಯತಮನ ಇ-ಮೇಲ್ನಿಂದ ತನಿಖೆ ಆರಂಭ
ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಇದೀಗ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಭಾರಿ ಅಕ್ರಮದ ಹಿಂದೆ ಪ್ರೇಮ...








