ಬಂಡೆ ಛಿದ್ರಗೊಳಿಸುವ ಸ್ಫೋಟಕ ಸಿಡಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಇಡಗೂರಿನಲ್ಲಿ ನಡೆದಿದೆ.
ಘಟನೆಯಲ್ಲಿ ಬಾಲಕನ ಬೆರಳು ಛಿದ್ರ ಛಿದ್ರವಾಗಿವೆ. ಬಾಲಕ ಮುಟ್ಟಿದ ಕೂಡಲೇ ಸ್ಫೋಟಕ ಸಿಡಿದಿದೆ. ಎಸ್ಸೆಸ್ಸೆಲ್ಸಿ ಓದುತ್ತಿರುವ ಮೋನಿಷ್ ಗಾಯಗೊಂಡಿರುವ ಬಾಲಕ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಫೋಟಕವನ್ನು ಶಾಲೆಯ ಹತ್ತಿರ ಇರುವ ಬಂಡೆಯ ಬಳಿ ಇಡಲಾಗಿತ್ತು ಎನ್ನಲಾಗಿದೆ. ಆಟದ ವಸ್ತು ಇರಬಹುದು ಎಂದು ಬಾಲಕ ಅದನ್ನು ಮುಟ್ಟಿದ್ದಾನೆ. ಈ ಘಟನೆ ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.








