ಪಾಕಿಸ್ತಾನದ ಆರೋಗ್ಯ ಸಚಿವರಿಗೆ ಕೊರೊನಾ ಸೋಂಕು
ಇಸ್ಲಾಮಾಬಾದ್, ಜುಲೈ 6: ಪಾಕಿಸ್ತಾನದ ಆರೋಗ್ಯ ಸಚಿವ ಡಾ. ಜಾಫರ್ ಮಿರ್ಜಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಸ್ವತಃ ಅವರೇ ಸೋಮವಾರ ನೀಡಿದ್ದಾರೆ. ಇವರು ಮಾರಣಾಂತಿಕ ವೈರಸ್ ಸೋಂಕು ದೃಢಪಟ್ಟ ದೇಶದ ಹಿರಿಯ ಸಚಿವರಾಗಿದ್ದು, ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯ ವಿಶೇಷ ಸಹಾಯಕರಾಗಿದ್ದಾರೆ.ಡಾ.ಜಾಫರ್ ಮಿರ್ಜಾ ಅವರಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು.

ನನಗೆ ಕೊರೊನಾದ ಸಾಧಾರಣ ಲಕ್ಷಣಗಳು ಕಾಣಿಸಿಕೊಂಡಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ದಯವಿಟ್ಟು ನನಗಾಗಿ ನಿಮ್ಮ ಪ್ರಾರ್ಥನೆಯಲ್ಲಿ ಪ್ರಾರ್ಥಿಸಿ. ಸಹೋದ್ಯೋಗಿಗಳೇ, ದಯವಿಟ್ಟು ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಿ. ಅದು ಖಂಡಿತವಾಗಿಯೂ ದೊಡ್ಡ ವ್ಯತ್ಯಾಸವನ್ನು ಮಾಡುತ್ತದೆ ಮತ್ತು ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಡಾ ಮಿರ್ಜಾ ಟ್ವೀಟ್ ಮಾಡಿದ್ದಾರೆ.








