ಜೈಪುರ: ಬಸ್ ಹಾಗೂ ರಿಕ್ಷಾ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, 12 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ಘಟನೆಯಲ್ಲಿ 8 ಮಕ್ಕಳು ಸೇರಿದಂತೆ 12 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಅಪಘಾತದಲ್ಲಿ ದಂಪತಿ ಮತ್ತು ಎಂಟು ಮಕ್ಕಳು ಸೇರಿದಂತೆ 12 ಜನ ಬಲಿಯಾಗಿದ್ದಾರೆ. ಮೃತರನ್ನು ಇರ್ಫಾನ್ ಅಲಿಯಾಸ್ ಬಂಟಿ (38), ಅವರ ಪತ್ನಿ ಜೂಲಿ (34), ಪುತ್ರಿ ಅಸ್ಮಾ (14), ಪುತ್ರ ಸಲ್ಮಾನ್ (8), ಪರ್ವೀನ್ (32), ಜರೀನಾ (35), ಸಾಕಿರ್ (6), ಸಾನಿ ಎಂದು ಗುರುತಿಸಲಾಗಿದೆ.
ಆಟೋ ಸವಾರ ಬರಿ ನಗರದ ಗುಮತ್ ಮೊಹಲ್ಲಾ ನಿವಾಸಿ. ಬರೌಲಿ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.








