ನಟ ಸುದೀಪ್ (Sudeep) ತಾಯಿಯ (Mother) ಅಂತಿಮ ದರ್ಶನ ಪಡೆಯಲು ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ.
ಶಿವರಾಜ್ಕುಮಾರ್ (Shivarajkumar) ದಂಪತಿ, ನಟಿ ತಾರಾ, ಡಾಲಿ ಧನಂಜಯ (Daali Dhananjay), ರಾಘವೇಂದ್ರ ರಾಜಕುಮಾರ್, ವೇಲು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದಾರೆ.
ಸುದೀಪ್ ತಾಯಿಯ ಅಂತಿಮ ದರ್ಶನ ಪಡೆದ ನಂತರ ದುಃಖದಲ್ಲಿರುವ ಸುದೀಪ್ರನ್ನು ಶಿವಣ್ಣ ಸಂತೈಸಿದ್ದಾರೆ. ಹಿರಿಯ ನಟಿ ತಾರಾ, ನಟ ಡಾಲಿ, ತರುಣ್ ಸುದೀರ್, ಅಭಿಮನ್ಯು ಕಾಶಿನಾಥ್, ಇಂದ್ರಜೀತ್ ಲಂಕೇಶ್, ರಕ್ಷಿತಾ ಪ್ರೇಮ್ ದಂಪತಿ ಸೇರಿದಂತೆ ಅನೇಕರು ತೆರಳಿ ಸಾಂತ್ವನ ಹೇಳಿದ್ದಾರೆ.
ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ.