ನಟ ದರ್ಶನ್ (Darshan) ಅಭಿನಯದ ‘ನವಗ್ರಹ’ (Navagraha) ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲು ಸಿದ್ಧವಾಗಿದೆ.
ನವೆಂಬರ್ 8ರಂದು ನವಗ್ರಹ ಚಿತ್ರ ಮತ್ತೊಮ್ಮೆ ಬಿಡುಗಡೆ ಆಗಲಿದೆ. 16 ವರ್ಷಗಳ ನಂತರ ಮತ್ತೆ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ದರ್ಶನ್, ತರುಣ್ ಸುಧೀರ್, ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಗಿರಿ ದಿನೇಶ್, ವರ್ಷ, ಶರ್ಮಿಳಾ ಮಾಂಡ್ರೆ ನಟಿಸಿದ್ದಾರೆ. ‘ನವಗ್ರಹ’ ಚಿತ್ರ ನವೆಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. 16 ವರ್ಷಗಳ ಹಿಂದೆ ಅಂದರೆ, 2008ರ ನ.7ರಂದು ಈ ಚಿತ್ರ ಬಿಡುಗಡೆಯಾಗಿತ್ತು.
ಚಿತ್ರವನ್ನು ತೂಗುದೀಪ ಸಂಸ್ಥೆಯ ನಿರ್ಮಾಣದಲ್ಲಿ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ದರ್ಶನ್ ಜೈಲುಪಾಲಾಗುತ್ತಿದ್ದಂತೆ ಅವರ ಅಭಿನಯದ ಚಿತ್ರಗಳು ಒಂದೊಂದಾಗಿ ಮತ್ತೆ ಬಿಡುಗಡೆಯಾಗುತ್ತಿವೆ. ಈಗಾಗಲೇ ಪೊರ್ಕಿ, ಕರಿಯ, ಶಾಸ್ತ್ರಿ ಚಿತ್ರಗಳು ರಿಲೀಸ್ ಆಗಿವೆ.







