ಗದಗ: ರೈತರ ಆಸ್ತಿ ವಕ್ಫ್ (Waqf Land) ಪಾಲಾಗುವುದಿಲ್ಲ. ಇದು ತಪ್ಪು ಕಲ್ಪನೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೈತರಿಗೆ ನೋಟಿಸ್ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಉಪಚುನಾವಣೆಗಾಗಿ ಮಾಡಿರುವ ಗೊಂದಲ, ಸೃಷ್ಟಿ ಹೊರತು ಬೇರೇನಲ್ಲ ಎಂದಿದ್ದಾರೆ.
ರೈತರ ಆಸ್ತಿ ಖಾತಾ ಬದಲಾವಣೆ ವಕ್ಫ್ ಆಗಿರುವ ಕುರಿತು ನಮ್ಮ ರೈತರಿಗೆ ಆತಂಕದ ಪರಿಸ್ಥಿತಿ ಇಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಸುದೀರ್ಘವಾಗಿ ಪರಿಶೀಲನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು 2019 ರಿಂದ 2023ರ ಅವಧಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಭಂದಿಸಿದಂತೆ ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದಿದ್ದಾರೆ.