ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿಗೆ ಕರಿಯ ಎಂದು ಕರೆದಿರುವ ಜಮೀರ್ ವಿರುದ್ಧ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿಯವರೆಗೆ ಹೇಳಿಕೆ ಸಮರ್ಥಿಸಿಕೊಂಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಈಗ ಖಂಡಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ಹೇಳಿಕೆಯನ್ನ ಒಪ್ಪುವುದಿಲ್ಲ. ಅದನ್ನ ನಾನು ಖಂಡಿಸ್ತೇನೆ. ಜಮೀರ್ ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳಬೇಕಾದರೆ ಜಮೀರ್ ಹೇಳಿದ್ದು ಸರಿಯಲ್ಲ. ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದಿದ್ದಾರೆ.
ಕಪ್ಪು ಬಿಳುಪು ಅದೆಲ್ಲಾ ಬೇಡ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಪ್ರೀತಿಯಿಂದ ಮಾತಾಡಿದ್ರೋ ಸಲುಗೆಯಿಂದ ಮಾತನಾಡಿದ್ದಾರೋ ತಪ್ಪು ತಪ್ಪೇ. ಜಮೀರ್ ಅವರಿಗೆ ಆಂತರಿಕವಾಗಿ ಹೇಳಿದ್ದೇವೆ. ಅವರು ಕ್ಷಮೆ ಕೂಡ ಕೇಳಿದ್ದಾರೆ ಎಂದು ಹೇಳಿದ್ದಾರೆ.
ವಕ್ಫ್ ವಿಚಾರದಲ್ಲಿ ನಾವು ಮಾತನಾಡಿದ್ದನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿಲ್ಲ. ಬಿಜೆಪಿ ಮಾತನಾಡಿದ್ದು ಮಾತ್ರ ಪ್ರಸಾರವಾಗುತ್ತಿದೆ. ಹೀಗಾಗಿ ಇದು ಗೊಂದಲ ಸೃಷ್ಟಿ ಮಾಡಿದೆ. ಬಿಜೆಪಿ ಕಾಲದಲ್ಲೇ ಪಹಣಿಗಳು ಬರುತ್ತಿವೆ ಎಂದಿದ್ದಾರೆ.








