‘ಪ್ರೆಗ್ನೆಂಟ್ ಮ್ಯಾನ್’ ಅಥವಾ ‘ಗರ್ಭಿಣಿ ಗಂಡು’ ಎನ್ನಲ್ಪಟ್ಟ US ಮೂಲದ ಥಾಮಸ್ ಬೀಟಿ, ಮೂಲತಃ ಹೆಣ್ಣಾಗಿದ್ದವರು ಲಿಂಗ ಬದಲಾವಣೆ ಮಾಡಿ ಗಂಡಾಗಿದ್ದರೂ ತಮ್ಮ ಗರ್ಭಾಶಯವನ್ನು ಉಳಿಸಿಕೊಂಡಿದ್ದರು. ಅವರು ಕೃತಕ ಗರ್ಭಧಾರಣೆ ಮೂಲಕ 2008ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಅವರ ಪತ್ನಿ ನ್ಯಾನ್ಸಿಗೆ ಗರ್ಭಧಾರಣೆ ಸಾಧ್ಯವಾಗದ ಕಾರಣ, ಬೀಟಿ ಈ ನಿರ್ಧಾರ ಕೈಗೊಂಡರು. ಅವರು ಮೂರು ಮಕ್ಕಳಿಗೆ ಜನ್ಮ ನೀಡಿ ಜಾಗತಿಕವಾಗಿ ಗಮನ ಸೆಳೆದರು. ಈ ಪ್ರಕರಣ ಲಿಂಗಬದಲಾವಣೆ ಹಾಗೂ ಸಂತಾನೋತ್ಪತ್ತಿ ಹಕ್ಕುಗಳ ಬಗ್ಗೆ ಮಹತ್ವದ ಚರ್ಚೆಗೆ ದಾರಿ ಮಾಡಿದೆ.
ಥಾಮಸ್ ಬೀಟಿ ಲಿಂಗ ಬದಲಾವಣೆಯ ನಂತರ ಗರ್ಭಧಾರಣೆಯನ್ನು ಆಯ್ಕೆ ಮಾಡಿದವರಲ್ಲಿ ಮೊದಲಿಗರು. ಅಷ್ಟೇ ಅಲ್ಲ, ಅವರು ಅನೇಕ ಸಂದರ್ಶನಗಳು ಮತ್ತು ಚರ್ಚೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಈ ನಿರ್ಧಾರ ಸಮಾಜದಲ್ಲಿ ಹೊಸ ರೀತಿಯ ಸಂವೇದನೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.
ಹಿಂದೂ ರಾಷ್ಟ ಸ್ಥಾಪನೆಗೆ ಯಾವುದೇ ಅವಕಾಶ ಕೊಡಬಾರದು – ಯತೀಂದ್ರ ಸಿದ್ದರಾಮಯ್ಯ
ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಂಗಳವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಸಮಗ್ರತೆಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು. ರಾಜ್ಯ ಸರಕಾರಿ...