ಹಾವೇರಿ: ದಂಪತಿ ತಮ್ಮ ಮಗುವಿನ ಮುಂದೆಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮೂರು ವರ್ಷದ ಮಗಳ ಎದುರೇ ತಂದೆ, ತಾಯಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಹಾವೇರಿ ತಾಲೂಕಿನ ಬೆಳವಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಬೆಳವಗಿಯ ನಿವಾಸಿ ಹನುಮಂತ ಹೊನ್ನಪ್ಪ (32) ಹಾಗೂ ಪತ್ನಿ ಸವಿತಾ (26) ಸಾವನ್ನಪ್ಪಿದ ದುರ್ದೈವಿಗಳು. ಆತ್ಮಹತ್ಯೆ ಮಾಡಿಕೊಂಡ ದಂಪತಿಯ 3 ವರ್ಷದ ಮಗಳು ಚೇತನಾ ಗುರುವಾರ ತಡರಾತ್ರಿ ಜೋರಾಗಿ ಅಳುವುದು ಕೇಳಿಸಿದೆ. ಹೀಗಾಗಿ ಅಕ್ಕಪಕ್ಕದವರು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.