ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಅವರು 40% ಕಮಿಷನ್ ಬಗ್ಗೆ ಮಾತನಾಡಿದ್ದು, ವಿರೋಧಿಗಳಿಗೆ ಟಾಂಗ್ ಕೊಡುವ ಯತ್ನ ಮಾಡಿದ್ದಾರೆ.
ವಿರುದ್ಧ 40% ಕಮಿಷನ್ ಆರೋಪ ಸುಳ್ಳು ಎನ್ನುವುದು ಲೋಕಾಯುಕ್ತ ತನಿಖೆಯಿಂದ (Lokayukta Enquiry) ಬೆಳಕಿಗೆ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯಾವುದೋ ಕೊಲೆ ಕೇಸ್ ನಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ. ಅಲ್ಲಿ ಸಾಕ್ಷಿಯ ಕೊರತೆ ಇರುತ್ತದೆ. ಹೀಗಾದರೆ, ಕೊಲೆಯೇ ನಡೆದಿಲ್ಲ ಎನ್ನುವಂತಾಗುತ್ತದೆಯೇ? ಅದು ಸಾಕ್ಷಿ ಕೊರತೆ ಅಷ್ಟೇ ಎಂದು ಹೇಳಇದ್ದಾರೆ.
40% ಕಮಿಷನ್ ಆರೋಪವನ್ನು ಕೆಂಪಣ್ಣ (Kempanna) ಮಾಡಿದ್ದರು. ಅವರ ಹೇಳಿಕೆಯ ಆಧಾರ ಮೇಲೆ ನಾವು ಆರೋಪ ಮಾಡಿದ್ದೆವು. ಆದಕ್ಕೆ ನಾನು ಕಮಿಷನ್ ರಚನೆ ಮಾಡಿದೆವು. ನಾನು ಆಯೋಗದ ವರದಿ ನೋಡಿಲ್ಲ. ಹಾಗಂದ ಮಾತ್ರಕ್ಕೆ ತಪ್ಪೇ ನಡೆದಿಲ್ಲ ಅಂತ ಅಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಈಗ ನನ್ನ ಮೇಲೆ ಸುಳ್ಳು ಕೇಸ್ ಹಾಕಲು ಶುರು ಮಾಡಿದ್ದಾರೆ. ಆದರೆ, ನಾನು ಅವುಗಳಿಗೆ ಅಂಜುವುದಿಲ್ಲ ಎಂದಿದ್ದಾರೆ.








