ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದಗಳು ಭುಗಿಲೆದ್ದಿರುವ ಈ ದಿನಗಳಲ್ಲಿ, ಮಂತ್ರಾಲಯದ ಜಾಗಕ್ಕೂ ಈ ವಿವಾದದ ಪ್ರಭಾವ ತಟ್ಟಿರುವುದು ಹೊಸ ತಿರುವು ಪಡೆದಿದೆ. ಮಾಜಿ ಸಚಿವ ಸಿಎಂ ಇಬ್ರಾಹಿಂ ತಮ್ಮ ತೀಕ್ಷ್ಣ ಮಾತುಗಳಿಂದ ಈ ಚರ್ಚೆಗೆ ಇನ್ನಷ್ಟು ಬಾಹ್ಯ ಶಕ್ತಿ ನೀಡಿದ್ದು, ಮಂತ್ರಾಲಯದ ಜಾಗ ನವಾಬರು ನೀಡಿರುವುದು ಎಂಬ ಅವರ ಹೇಳಿಕೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ಬಿರುಕು ಮೂಡಿಸಿದೆ.
ರಾಯಚೂರಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು. ಅದು ವಕ್ಫ್ ಆಸ್ತಿ ಎಂದು ಯಾರಾದರೂ ಕೇಳಲು ಹೋಗಿದ್ದಾರಾ? ಶ್ರೀ ರಾಘವೇಂದ್ರ ಸ್ವಾಮೀಜಿಯವರು ಮಂತ್ರಾಲಯಕ್ಕೆ ಬಂದು, ನಾವು ನಮ್ಮ ಬೃಂದಾವನ ಇಲ್ಲಿಯೇ ಮಾಡುತ್ತೇವೆ ಎಂದು ಹೇಳಿದಾಗ, ಖಾಜಿಗೆ ನೀಡಿದ್ದ ಜಾಗವನ್ನು ಆಂದೋನಿ ನವಾಬರು ಹಿಂಪಡೆದು, ಸ್ವಾಮೀಜಿಗಳಿಗೆ ನೀಡಿದರು. ಇದು ನಾನು ಮಾಡಿದ ಕಥೆ ಅಲ್ಲ, ಸ್ವತಃ ಮಂತ್ರಾಲಯದ ಸ್ವಾಮೀಜಿಗಳೇ ಹೇಳಿದ ಮಾತು ಎಂದು ಹೇಳಿದ್ದಾರೆ.ಇಬ್ರಾಹಿಂ ತಮ್ಮ ಹೇಳಿಕೆಯಲ್ಲಿ ಇನ್ನಷ್ಟು ಇತಿಹಾಸದ ಉದಾಹರಣೆಗಳನ್ನು ನೀಡಿ, ಶೃಂಗೇರಿ ಶಾರದಾಪೀಠದ ಮೇಲೆ ಪೇಶ್ವೆಯರು ದಾಳಿ ಮಾಡಿದಾಗ, ಟಿಪ್ಪು ಸುಲ್ತಾನ್ ತನ್ನ ಸೈನ್ಯ ಕಳುಹಿಸಿ ಶಾರದಾಪೀಠವನ್ನು ಮತ್ತೆ ಸ್ಥಾಪನೆ ಮಾಡಿದರು. ಇದು ನಮ್ಮ ಸಂಸ್ಕೃತಿಯಲ್ಲಿನ ಸಹಜತೆ, ಸಾಮರಸ್ಯ. ಇವುಗಳನ್ನು ಮರೆತು, ಕೆಲವರು ರಾಜಕೀಯ ಲಾಭಕ್ಕಾಗಿ ಚಿಲ್ಲರೆ ವಿವಾದಗಳನ್ನೆಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂರ ಈ ಹೇಳಿಕೆ, ರಾಜ್ಯದ ಮಸೀದಿ, ದೇವಸ್ಥಾನ, ಮತ್ತು ಶಾಲೆಗಳ ಜಾಗವನ್ನೊಳಗೊಂಡಂತೆ ಹಲವೆಡೆ ಉಂಟಾಗಿರುವ ವಕ್ಫ್ ವಿವಾದಗಳ ಬೆನ್ನಲ್ಲಿಯೇ ಬಂದಿರುವುದರಿಂದ, ಈಗ ಮತ್ತೊಮ್ಮೆ ನವಾಬರ ಕಾಲದ ದಾನ, ಧರ್ಮ, ಆಸ್ತಿಪಾಸ್ತಿ ಹಂಚಿಕೆಯ ಚರ್ಚೆ ಹುಟ್ಟು ಹಾಕಿದೆ.
ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು
ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...








