ಬ್ಯಾಂಕಾಕ್: ಕಳ್ಳತನದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಮಹಿಳೆಗೆ ಬರೋಬ್ಬರಿ 235 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಭಯಾನಕ ಶಿಕ್ಷೆ ವಿಧಿಸಿರುವ ಈ ಘಟನೆ ಥೈಲ್ಯಾಂಡ್‌ನ (Thailand) ಖೋನ್ ಕೇನ್ ಪ್ರದೇಶದಲ್ಲಿ ನಡೆದಿದೆ. ಶಿಕ್ಷೆಗೆ ಒಳಗಾದ ಮಹಿಳೆಯನ್ನು ಸೋಮ್ಜಿತ್ ಖುಮ್ದುವಾಂಗ್ ಎಂದು ಗುರುತಿಸಲಾಗಿದೆ. ಥೈಲ್ಯಾಂಡ್‌ನ ಈಶಾನ್ಯ ಭಾಗದಲ್ಲಿರುವ ಖೋನ್ ಕೇನ್ ಪ್ರದೇಶದಲ್ಲಿ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಚಿನ್ನಾಭರಣ ಕಳ್ಳತನ ಮಾಡಿದ್ದಳು. ಈ ಕುರಿತು ಅಂಗಡಿ ಮಾಲೀಕನಿಗೆ ಅನುಮಾನ ಬಂದಿತ್ತು. ಇದರಿಂದ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲಿಸಿದಾಗ, ಈ ಮಹಿಳೆ ಬರೋಬ್ಬಿರ 47 ಬಾರಿ ಕಳ್ಳತನ ಮಾಡಿರುವುದು ಗೊತ್ತಾಗಿತ್ತು.
ಮಹಿಳೆ ತಾನು ಕದ್ದ ಚಿನ್ನದಿಂದ ಭೂಮಿ ಖರೀದಿಸಿದ್ದಾಳೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸಿದ್ದಾಳೆ. ಹೊಸ ಬೈಕ್ ಖರೀದಿಸಿದ್ದಾಳೆ. ಮಹಿಳೆ ಒಟ್ಟು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದಾಳೆ. 10 ವರ್ಷಗಳಿಂದ ಮಹಿಳೆ ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಾಲೀಕರು ಆಕೆಗೆ ಕದ್ದ ವಸ್ತುಗಳನ್ನು ಹಿಂದಿರುಗಿಸುವುದಾಗಿ ಕೇಳಿದ್ದರು. ನೀನು ಹಿಂದಿರುಗಿಸಿದರೆ ನಾನು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದರು. ಆದರೆ, ಅದಕ್ಕೆ ಆಕೆ ಒಪ್ಪಿಲ್ಲ. ಹೀಗಾಗಿ ದೂರು ನೀಡಿದ್ದರು. ಸದ್ಯ ಥೈಲ್ಯಾಂಡ್ ನ್ಯಾಯಾಲಯ ಮಹಿಳೆಗೆ 235 ವರ್ಷಗಳ ಶಿಕ್ಷೆ ವಿಧಿಸಿದೆ.






