ಬೆಂಗಳೂರು: ರೇಷನ್ ಕಾರ್ಡ್ ಗೊಂದಲಕ್ಕೆ ತೆರೆ ಎಳೆದಿರುವ ಸಿಎಂ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಅರ್ಹರ ರೇಷನ್ ಕಾರ್ಡ್ ರದ್ದಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. ರೇಷನ್ ಕಾರ್ಡ್ ವಿಚಾರದಲ್ಲಿ ಮಾಧ್ಯಮಗಳು ಗೊಂದಲ ಸೃಷ್ಟಿಸುತ್ತಿವೆ. ಅನರ್ಹರಿಗೆ ಮಾತ್ರ ನಾವು ಕಾರ್ಡ್ ರದ್ದು ಮಾಡಲು ಮುಂದಾಗಲಾಗಿದೆ. ಅರ್ಹರಿಗೆ ಯಾರಿಗೂ ತಪ್ಪಿಸುವುದಿಲ್ಲ. ಒಟ್ಟಾರೆ ಬಡವರಿಗೆ ಕೊಡಬೇಕು ಎಂದು ನನ್ನ ಹತ್ರ ಹೇಳುತ್ತೀರಿ. ಬರೆಯುವಾಗ, ತೋರಿಸುವಾಗ ಬಿಜೆಪಿ ಹೇಳಿದ್ದು ಮಾತ್ರ ಪ್ರಸಾರ ಮಾಡಬೇಡಿ. ನಮ್ಮ ಮಾತನ್ನು ಪ್ರಸಾರ ಮಾಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ಸಹಾಯ ಮಾಡಲು ಕಾರ್ಡ್ ಕೊಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆ ಕೊಟ್ಟಿದ್ದು ನಾನು. ಬಿಜೆಪಿ ಅಲ್ಲ. ಕುಮಾರಸ್ವಾಮಿ ಅಲ್ಲ. ಅವರಿಗೆ ಈ ವಿಷಯವಾಗಿ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.








