ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲೊಂದು ದಾರುಣ ಘಟನೆ ನಡೆದಿದ್ದು, 26 ವರ್ಷದ ಶಿಕ್ಷಕಿ ರಮಣಿಯನ್ನು ಮದುವೆಗೆ ನಿರಾಕರಿಸಿದ್ದಕ್ಕಾಗಿ, 30 ವರ್ಷದ ಮದನ್ ಎಂಬಾತ ಹತ್ಯೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಸ್ಥಳೀಯ ಶಾಲೆಯ ಆವರಣದಲ್ಲಿ ನಡೆದಿದ್ದು ಇದರಿಂದ ಇಡೀ ಪ್ರದೇಶವೇ ದಿಗ್ಭ್ರಮೆಗೊಂಡಿದೆ.
ಮದನ್ ಎಂಬಾತ ರಮಣಿಯನ್ನು ಕಳೆದ ಕೆಲವು ತಿಂಗಳುಗಳಿಂದ ಮದುವೆಯಾಗಲು ಒತ್ತಾಯಿಸುತ್ತಿದ್ದ. ಆದರೆ, ರಮಣಿ ಮದುವೆಗೆ ಒಪ್ಪದ ಕಾರಣ, ಅವನು ತೀವ್ರ ಕೋಪಗೊಂಡಿದ್ದ. ಶಾಲೆಯ ಆವರಣದೊಳಗೆ ಈ ದಾಂಧಲೆ ನಡೆದಿದೆ. ಮದನ್ ರಮಣಿಯ ಮೇಲೆ ಮಾರಕಾಸ್ತ್ರದೊಂದಿಗೆ ಪ್ರಹಾರ ಮಾಡಿದ್ದು, ಅವರ ದೇಹದಲ್ಲಿ ಗಂಭೀರ ಗಾಯಗಳಾಗಿವೆ.
ವಿಪರೀತ ರಕ್ತಸ್ರಾವವಾಗುತ್ತಿದ್ದ ರಮಣಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು.
ಈ ಘಟನೆಗೆ ತೀವ್ರ ಆಘಾತಗೊಂಡ ಸ್ಥಳೀಯರು ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಶಿಕ್ಷಣ ಸಚಿವ ಅನ್ಸಿಲ್ ಮಹೇಶ್ ಪೊಯ್ಯಮಿಳಿ ಈ ಘಟನೆಗೆ ಪ್ರತಿಕ್ರಿಯಿಸುತ್ತ, ಇಂತಹ ಕ್ರೂರ ಕೃತ್ಯಗಳನ್ನು ಯಾವ ಸಮಾಜವೂ ಸಹಿಸಬಾರದು. ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಹೇಳಿದ್ದಾರೆ.