ಆರ್ಯವೀರ್ ಸೆಹ್ವಾಗ್ ತನ್ನ ತಂದೆ ವೀರೇಂದ್ರ ಸೆಹ್ವಾಗ್ ಅವರಂತೆ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತಿದ್ದು, ‘ಮರಿ ವೀರೂ’ ಎಂದು ಕರೆಯಲ್ಪಡುವಂತೆ ಮಾಡಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ್ ಸೆಹ್ವಾಗ್ ಡೆಲ್ಲಿ ತಂಡದ ಪರ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ಮೇಘಾಲಯ ವಿರುದ್ಧದ ಇನ್ನಿಂಗ್ಸ್ನಲ್ಲಿ 200 ರನ್ಗಳ ಅಜೇಯ ದ್ವಿಶತಕ ಸಿಡಿಸುವ ಮೂಲಕ ತನ್ನ ಶ್ರೇಷ್ಠ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.
ಆರ್ಯವೀರ್ನ ಬ್ಯಾಟಿಂಗ್ ಶೈಲಿ ತಮ್ಮ ತಂದೆಯಂತೆಯೇ ಇದ್ದು, ಬೌಂಡರಿ ಹಾಗೂ ಸಿಕ್ಸರ್ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. 34 ಬೌಂಡರಿಗಳು ಮತ್ತು 2 ಸಿಕ್ಸರ್ಗಳನ್ನು ತಮ್ಮ ಇನ್ನಿಂಗ್ಸ್ನಲ್ಲಿ ಸಿಡಿಸಿರುವುದು ಅವರ ಆಟದ ಶೈಲಿಯನ್ನು ತೋರಿಸುತ್ತದೆ. ಆರ್ಯವೀರ್ ಆಟದ ವೈಶಿಷ್ಟ್ಯವೆಂದರೆ, ಆತ ಕ್ರೀಡಾಂಗಣದಲ್ಲಿ ಅಬ್ಬರದ ಶೈಲಿ ತೋರಿಸುತ್ತಿದ್ದರೂ, ಅಗತ್ಯವಿದ್ದಾಗ ತಾಳ್ಮೆಯನ್ನು ಮೆರೆದು ಎಚ್ಚರಿಕೆಯಿಂದ ಬ್ಯಾಟ್ ಮಾಡುತ್ತಾನೆ.
ಅರ್ನವ್ ಬುಗ್ಗಾ (114) ಮತ್ತು ಧನ್ಯ ನಕ್ರಾ (98*) ಅವರ ಜೊತೆಗೆ, ಡೆಲ್ಲಿ ತಂಡದ ಇತರ ಯುವ ಆಟಗಾರರೂ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಡೆಲ್ಲಿ ಈಗಾಗಲೇ ಮೊದಲ ಇನ್ನಿಂಗ್ಸ್ನಲ್ಲಿ 468 ರನ್ಗಳನ್ನು ಕಲೆಹಾಕಿ, ಬಲಿಷ್ಠ ಸ್ಥಿತಿಯಲ್ಲಿದೆ.
ಡೆಲ್ಲಿ 208 ರನ್ಗಳ ದೊಡ್ಡ ಮುನ್ನಡೆ ಹೊಂದಿದ್ದು, 468 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ಮೇಘಾಲಯ ಒಟ್ಟು 260ಕ್ಕೆ ಆಲೌಟ್ ಆಗಿದೆ.
ವೀರೇಂದ್ರ ಸೆಹ್ವಾಗ್ ತಮ್ಮ ಮಗನಿಗೆ ನೀಡಿದ ಭರವಸೆ ಇದೀಗ ಎಲ್ಲರ ಗಮನ ಸೆಳೆದಿದೆ. 2015ರಲ್ಲಿ ಕೊಟ್ಟ ಮಾತಿನಂತೆ, ತನ್ನ 319 ರನ್ಗಳ ದಾಖಲೆಯನ್ನು ಮುರಿದರೆ ಮಗನಿಗೆ ಫೆರಾರಿ ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದ ಸೆಹ್ವಾಗ್, ಈಗ ಆರ್ಯವೀರ್ ಈ ಗುರಿ ತಲುಪಿದರೆ ತನ್ನ ಮಾತನ್ನು ನಿಜಗೊಳಿಸಬಹುದೇ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ಕ್ರಿಕೆಟ್ ಪ್ರೇಮಿಗಳು ಈಗಾಗಲೇ ಆರ್ಯವೀರ್ ಸೆಹ್ವಾಗ್ ಅವರನ್ನು ತಮ್ಮ ತಂದೆಯಂತೆ ಮಿಂಚುವ ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ಪ್ರಶಂಸಿಸುತ್ತಿದ್ದಾರೆ.








