ಮುಂಬಯಿ: ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಹಲವು ರಾಜ್ಯಗಳ ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎಗೆ ಬಹುತೇಕ ಕಡೆ ಮುನ್ನಡೆ ಸಿಗುತ್ತಿದೆ.
ಈ ಪೈಕಿ ಭಾರೀ ಕುತೂಹಲ ಹಾಗೂ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಹಾರಾಷ್ಟ್ರದಲ್ಲಿ (Maharashtra) ಬಿಜೆಪಿ (BJP) ನೇತೃತ್ವದ ಮಹಾಯುತಿ (Mahayuti) ಮೈತ್ರಿಗೆ 200ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಿಕ್ಕಿದೆ.
ಈಗಿನ ಟ್ರೆಂಡ್ ಪ್ರಕರಾ 223 ಕ್ಷೇತ್ರಗಳಲ್ಲಿ ಮಹಾಯುತಿ ಮುನ್ನಡೆ ಸಾಧಿಸಿದ್ದರೆ ಮಹಾವಿಕಾಸ ಅಘಾಡಿ (Maha Vikas Aghadi) ಒಕ್ಕೂಟ 54 ಕ್ಷೇತ್ರಗಳು, ಇತರರು 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಮಹಾರಾಷ್ಟ್ರದಲ್ಲಿ ಒಟ್ಟು 288 ಕ್ಷೇತ್ರಗಳು ಇದ್ದು ಬಹುಮತಕ್ಕೆ 145 ಸ್ಥಾನಗಳ ಅಗತ್ಯವಿದೆ. ಬಹುತೇಕ ಸಮೀಕ್ಷೆಗಳು ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಹೇಳಿದ್ದವು. ಈಗ ಅದರಂತೆ ಮಹಾಯುತಿ ಭಾರೀ ಗೆಲುವನ್ನು ದಾಖಲಿಸುವ ಮುನ್ಸೂಚನೆ ನೀಡುತ್ತಿದೆ.








