ಬೆಂಗಳೂರು: ರಾಜ್ಯದಲ್ಲಿ ನಡೆದ ಮೂರುಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಷ್ಟು ಸುಳ್ಳು ಆರೋಪ ಮಾಡಿದರೂ ಮತದಾರರು ಮಾತ್ರ ನಮಗೆ ಆಶೀರ್ವಾದ ಮಾಡಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದಾರೆ. ಹೀಗಾಗಿ ಬಿಜೆಪಿಗೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಇದನ್ನು ಬಿಜೆಪಿ ಅರ್ಥ ಮಾಡಿಕೊಂಡು ನಡೆಯಬೇಕು ಎಂದು ಗುಡುಗಿದ್ದಾರೆ.
ಉಪ ಚುನಾವಣೆಯ ಗೆಲುವು 2028ರ ವಿಧಾನಸಭೆ ಚುನಾವಣೆ ಗೆಲುವಿಗೆ ಮುನ್ನುಡಿಯಾಗಿದೆ. ಚನ್ನಪಟ್ಟಣದಲ್ಲಿ ನಿಖಿಲ್ (Nikhil Kumaraswamy) ಸೋತಿದ್ದಾರೆ. ಕುಮಾರಸ್ವಾಮಿ (HD Kuaraswamy) ವಿರುದ್ಧ ಜನ ತೀರ್ಪು ನೀಡಿದ್ದಾರೆ. ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಅವರ ತಂದೆ ಬೊಮ್ಮಾಯಿಯ ಸೋಲು ಅದು ಎಂದಿದ್ದಾರೆ.
ವಿಪಕ್ಷಗಳು ನಮ್ಮ ಗ್ಯಾರಂಟಿಯನ್ನು ಟೀಕೆ ಮಾಡಿದ್ದವು. ವಿಪಕ್ಷಗಳು ಟೀಕೆ ಮಾಡುವುದನ್ನು ಬಿಡಿ ಎಂದು ಜನ ತೀರ್ಪು ನೀಡಿದ್ದಾನೆ. ಇದನ್ನು ಅರಿತು ಬಿಜೆಪಿ ನಡೆಯಬೇಕು. ಜನರ ಬದುಕಿನ ಮೇಲೆ ರಾಜಕೀಯ ಮಾಡಬೇಡಿ ಅಂತ ಸಂದೇಶ ಜನ ಕೊಟ್ಡಿದ್ದಾರೆ. ಟೀಕೆಗಳು ಸಾಯ್ತವೇ, ಕೆಲಸ ಉಳಿಯತ್ತವೆ ಎಂದು ಹೇಳಿದ್ದಾರೆ.








