BJP, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದಲ್ಲಿ NCP ಒಳಗೊಂಡ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವಿನ ನಂತರ ಮಹಾರಾಷ್ಟ್ರದ DCM ಫಡ್ನವೀಸ್ ರಾಜ್ಯದ ಹೊಸ CM ಆಗುವ ಸಾಧ್ಯತೆಯಿದೆ. ಏಕೆಂದರೆ ಅಜಿತ್ ಪವಾರ್ ನೇತೃತ್ವದ NCP ಅವರ ಹೆಸರಿಗೆ ಯಾವುದೇ ಆಕ್ಷೇಪಣೆಯಿಲ್ಲ ಎಂದು BJP ನಾಯಕತ್ವಕ್ಕೆ ತಿಳಿಸಿದೆ.ಏಕನಾಥ್ ಶಿಂಧೆ ಮಂಗಳವಾರ CM ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರವೇ, ಹೊಸ CM ಪಟ್ಟ ಯಾರಿಗೆ ಎಂಬ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಎಲ್ಲರ ಚಿತ್ತ ‘ಮಹಾ’ಪಟ್ಟದ ಕಡೆಗೆ ಕುತೂಹಲಕ್ಕೆ ನಾಳೆ ಬ್ರೇಕ್ ಬೀಳಲಿದೆ.
ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್ಗೆ $120ಕ್ಕೆ ಏರಿಕೆ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...








