ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಎಪಿಎಲ್ ಕಾರ್ಡ್ ರದ್ದಾಗುತ್ತಿರುವ ವಿಚಾರ ದೊಡ್ಡ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಡ್ ರದ್ದು ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಬಿಪಿಎಲ್ ಕಾರ್ಡ್ ನವರಿಗೆ ಮತ್ತೆ ಸಿಹಿ ಸುದ್ದಿ ಸಿಕ್ಕಿದೆ.
6 ತಿಂಗಳಿಂದ ಅಕ್ಕಿ ಪಡೆಯದೇ ಇದ್ದ 2.76 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ. ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಂದರ್ಭದಲ್ಲಿ ಆಹಾರ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿತ್ತು. 6 ತಿಂಗಳಿನಿಂದ 2.76 ಲಕ್ಷ ಜನ ಅಕ್ಕಿ ತೆಗೆದುಕೊಂಡಿರಲಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಬಿಪಿಎಲ್ ಕಾರ್ಡ್ ಪಡೆದಿದ್ದವರು ಅಕ್ಕಿ ಪಡೆದಿರಲಿಲ್ಲ. ವಿಧ್ಯಾಭ್ಯಾಸ, ಹಾಸ್ಪಿಟಲ್ ಗೆ ಅಂತಾ ಕಾರ್ಡ್ ಪಡೆದು ಅಕ್ಕಿ ಪಡೆದಿರಲಿಲ್ಲ. ಹೀಗಾಗಿ ಇಂಥವರಿಗೆ ಅಕ್ಕಿ ಕೊಡಲು ಈಗ ಸರ್ಕಾರ ಮುಂದಾಗಿದೆ.
ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಆಗಿರುವ ಕಾರ್ಡ್‌ಗಳ ಪರಿಷ್ಕರಣೆ ಭರದಿಂದ ಸಾಗಿದೆ.