ಬೆಳಗಾವಿ: ಬಾಂಗ್ಲಾದೇಶ (Bangladesh)ದಲ್ಲಿ ನಡೆಯುತ್ತಿರುವ ಹಿಂಸಾರಾಚರಕ್ಕೆ ಸಂಬಂಧಿಸಿದಂತೆ ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹುಕ್ಕೇರಿಯಲ್ಲಿ ಮಾತನಾಡಿದ ಅವರು, ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Brahmachari) ಅವರನ್ನು ಬಾಂಗ್ಲಾದಲ್ಲಿ ಬಂಧಿಸಿರುವು ಅಕ್ಷಮ್ಯ ಅಪರಾದ. ಬಾಂಗ್ಲಾದೇಶ ಹುಟ್ಟಿರುವುದೇ ಭಾರತದಿಂದ. ಆದರೆ, ಅಲ್ಲಿನ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ಖಂಡನೀಯ. ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಅಲ್ಲಿನ ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ.
ಈ ಘಟನೆಗಳ ಬಗ್ಗೆ ನಮ್ಮ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಬಾಂಗ್ಲಾ ರಾಷ್ಟ್ರ ಹುಟ್ಟಿಸಿದಂತೆ ಸರಿಯಾದ ಬುದ್ದಿ ಕಲಿಸುವ ಪ್ರಕ್ರಿಯೆ ಕೂಡ ಆಗಬೇಕು. ಹೀಗಾಗಿ ಪ್ರಧಾನಿ ಮೋದಿ ಅವರು ಕೂಡಲೇ ಮಧ್ಯೆ ಪ್ರವೇಶಿಸಬೇಕು ಎಂದಿದ್ದಾರೆ.