ಬೆಂಗಳೂರು: ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಟಿ ದೇವೇಗೌಡ ಹಾಗೂ ಅವರ ಪುತ್ರ ಜೈಲಿನಲ್ಲಿರಬೇಕಿತ್ತು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಆರೋಪಿಸಿದ್ದಾರೆ.
ಧಾನಸೌಧದಲ್ಲಿಂದು (Vidhanasoudha) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನು ಬಂಧಿಸಲು ಸಿದ್ಥತೆ ಮಾಡಿಕೊಂಡಿತ್ತು. ಈ ವಿಷಯವಾಗಿ ನನಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿತ್ತು. ಆನಂತರ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ದರು. ಆಗ ಪೊಲೀಸರು ಅರೆಸ್ಟ್ ಮಾಡುವುದನ್ನು ಬಿಟ್ಟರು ಎದಿದ್ದಾರೆ.
ಜಿಟಿ ದೇವೇಗೌಡರಿಗೆ ಅಸಮಾಧಾನ ಇರುವುದು ನಿಜ. ಅವರಿಗೆ ಸ್ಥಾನಮಾನದ ಬಗ್ಗೆ ಅಸಮಾಧಾನ ಇದೆ. ಚನ್ನಪಟ್ಟಣ ಚುನಾವಣೆಗೆ ಬರುವಂತೆ ಕೂಡ ಕರೆಯಲಾಗಿತ್ತು. ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.