ಹಿರಿಯ ನಟಿ ಲೀಲಾವತಿ (Leelavathi) ಅವರು ನಿಧನರಾಗಿ ಇಂದಿಗೆ ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಅವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಅವರ ಮಗ ವಿನೋದ್ ರಾಜ್ ಅವರು, ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿನ ನಿವಾಸದಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಲೀಲಾವತಿ ಅವರ ಇಷ್ಟವಾದ ತಿಂಡಿಗಳನ್ನು ಅವರ ಫೋಟೋ ಮುಂದೆ ಇಟ್ಟು, ವಿಶೇಷ ಪೂಜೆ ಮಾಡಲಾಗಿದೆ. ಲೀಲಾವತಿ ಸಮಾಧಿ ಬಳಿ ಅಭಿಮಾನಿಗಳು ಆಗಮಿಸಿ ದರ್ಶನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಲೀಲಾವತಿ ಅವರ ಸ್ಮಾರಕವನ್ನು ವಿನೋದ್ ರಾಜ್ ಲೋಕಾರ್ಪಣೆಗೊಳಿಸಿದ್ದಾರೆ.