ಶಿಕ್ಷಕರೊಬ್ಬರು ತಮ್ಮ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಭಾಗ್ಯ ಕರುಣಿಸಿದ್ದಾರೆ.
ತುಮಕೂರು ತಾಲೂಕಿನ ಹರಳೂರು ಗ್ರಾಮದಲ್ಲಿರುವ ಸಿದ್ದಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ರಾಜಣ್ಣ ಎಂಬುವರು ತಮ್ಮ ಶಾಲೆಯ ಒಟ್ಟು 51 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅಡುಗೆ ಸಿಬ್ಬಂದಿಗೆ ಈ ಭಾಗ್ಯ ಕರುಣಿಸಿದ್ದಾರೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪುಣೆಗೆ ತೆರಳಿ, ಅಲ್ಲಿಂದ ಶಿರಡಿ, ನಾಸಿಕ್, ಪಂಡರಾಪುರ, ಶನಿ ಶಿಂಗ್ನಾಪುರ, ಅಜಂತಾ ಎಲ್ಲೋರಾ ಸೇರಿದಂತೆ ವಿಜಯಪುರ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಶಿಕ್ಷಕರು ಒಟ್ಟು 2,67 ಲಕ್ಷ ರೂ. ಹಣವನ್ನ ತಾವೇ ನೀಡಿದ್ದಾರೆ. ಪ್ರವಾಸ ಮಾಡಿದ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.








